ದೆಹಲಿಯಲ್ಲಿ ರಸ್ತೆ ಮಧ್ಯೆ ಉದ್ಯಮಿ ಕಾರು ನಿಲ್ಲಿಸಿ 2 ಕೋಟಿ ರೂ. ಲೂಟಿ ಮಾಡಿದ ದರೋಡೆಕೋರರು; ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಲ್ಲಿ ಸೆರೆ

ನವದೆಹಲಿ: ದೆಹಲಿಯ ರೋಹಿಣಿ ಸೆಕ್ಟರ್ 24 ರಲ್ಲಿ ದುಷ್ಕರ್ಮಿಗಳು ಬಂದೂಕು ತೋರಿಸಿ ಉದ್ಯಮಿಯನ್ನು ಲೂಟಿ ಮಾಡಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಹಾದುಹೋಗುವ ಜನನಿಬಿಡ ರಸ್ತೆಯ ಮಧ್ಯದಲ್ಲಿ ರಾತ್ರಿಯ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೂವರು ಸ್ಕೂಟಿ ಸವಾರರು ಉದ್ಯಮಿಯೊಬ್ಬರ ಕಾರಿನ ಗಾಜು ಒಡೆದು, ನಂತರ ಪಿಸ್ತೂಲ್ ತೋರಿಸಿ ಡಿಕ್ಕಿಯಲ್ಲಿದ್ದ ಮೂರು ಬ್ಯಾಗಿನಲ್ಲಿದ್ದ 1. 97 ಕೋಟಿ ರೂ.ಗಳಷ್ಟು ಹಣವನ್ನು ದೋಚಿದ್ದಾರೆ ಎಂದು ವರದಿಯಾಗಿದ್ದು, ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾತ್ರಿ ಸಮಯ ರಸ್ತೆಯೊಂದರಲ್ಲಿ ಸ್ಕೂಟಿ ಸವಾರನೊಬ್ಬ ಸೆಡಾನ್ ಕಾರಿನ ಚಾಲಕನೊಂದಿಗೆ ಜಗಳವಾಡುತ್ತಾನೆ. ಸ್ಕೂಟಿಯಲ್ಲಿ ಬಂದ ವ್ಯಕ್ತಿ ಮಾರಕಾಸ್ತ್ರ ಹಿಡಿದು ಕಾರಿನೊಳಗಿದ್ದ ಉದ್ಯಮಿ ಹಾಗೂ ಇತರ ಇಬ್ಬರಿಗೆ ಬೆದರಿಕೆ ಹಾಕಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಕೂಟಿ ಸವಾರನೊಬ್ಬ ಬಿಳಿ ಕಾರ್‌ ಮುಂದೆ ಸ್ಕೂಟಿ ನಿಲ್ಲಿಸಿ ಚಾಲಕನೊಂದಿಗೆ ಜಗಳವಾಡುತ್ತಿರುವಾಗ ಹಿಂದಿನಿಂದ ಬಂದ ಇನ್ನೊಬ್ಬ ವ್ಯಕ್ತಿ ಚಾಲಕನ ಪಕ್ಕದ ಕಿಟಕಿಗೆ ಗಾಜು ಒಡೆದಿದ್ದಾನೆ.
ಕೆಲವು ಸೆಕೆಂಡುಗಳ ನಂತರ, ಇನ್ನೂ ಮೂವರು ವ್ಯಕ್ತಿಗಳು ಹಿಂದಿನಿಂದ ಬಂದು ಕಾರಿನ ಮುಂಭಾಗದ ಕಿಟಕಿಯನ್ನು ಒಡೆದು ಚಾಲಕನಿಗೆ ಬಲವಂತವಾಗಿ ಕಾರಿನ ಡಿಕ್ಕಿ ತೆರೆಯುವಂತೆ ಬೆದರಿಕೆ ಹಾಕಿದ್ದಾರೆ ಮತ್ತು ಹಾಗೆ ಮಾಡಿದ ನಂತರ, ದರೋಡೆಕೋರರು ಹಣ ತುಂಬಿದ ಮೂರು ಚೀಲಗಳನ್ನು ತೆಗೆದುಕೊಂಡು ಅವರ ಸ್ಕೂಟರ್‌ಗಳಲ್ಲಿ ವೇಗವಾಗಿ ಹೋಗುವುದನ್ನು ಕಾಣಬಹುದು. .
ಎನ್‌ಡಿಟಿವಿ ವರದಿಗಳ ಪ್ರಕಾರ, ಉದ್ಯಮಿ ಹಳೆ ದೆಹಲಿಯ ಚಾಂದಿನಿ ಚೌಕ್‌ನಿಂದ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಣವನ್ನು ಎಲ್ಲಿ ಇಡಲಾಗಿದೆ ಎಂಬುದು ಗೊತ್ತಾದಾಗಿನಿಂದ ದರೋಡೆಕೋರರು ಅವರನ್ನು ಅಲ್ಲಿಂದಲೇ ಪತ್ತೆ ಹಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement