ಭಾರತದಲ್ಲಿ ಮಾತ್ರ…!? : ಹೊಲದಲ್ಲಿ ಕರಡಿ ವೇಷ ಹಾಕಿಕೊಂಡು ಓಡಾಡಿದ್ರೆ ತಿಂಗ್ಳಿಗೆ 15,000 ರೂ. ಸಂಬಳ…!

ಹೈದರಾಬಾದ್: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ರೈತರು ತಮ್ಮ ಬೆಳೆಯನ್ನು ಮಂಗಗಳು ಮತ್ತು ಕಾಡುಹಂದಿಗಳಿಂದ ರಕ್ಷಿಸಿಕೊಳ್ಳಲು ಒಂದು ವಿಶಿಷ್ಟ ಉಪಾಯವನ್ನು ಕಂಡುಕೊಂಡಿದ್ದಾರೆ.
ಜನರಿಗೇ ಕರಡಿಯ ವೇಷ ಹಾಕಿಸಿ ತಮ್ಮ ಹೊಲದಲ್ಲಿ ನಿಲ್ಲಿಸುವ ಮೂಲಕ ಅವರು ತಮ್ಮ ಹೊಲಕ್ಕೆ ಕೋತಿಗಳು ಬರದಂತೆ ತಡೆಯುತ್ತಿದ್ದಾರೆ.

ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಅವರು ಹೊಲಕ್ಕೆ ದಾಳಿ ಇಟ್ಟು ಬೆಲಳೆಗಳಿಗೆ ಹಾನಿ ಮಾಡುವ ಕೋತಿಗಳು ಮತ್ತು ಕಾಡುಹಂದಿಗಳನ್ನು ನಿಯಂತ್ರಿಸಲು ಕರಡಿಯ ವೇಷ ಧರಿಸಲು ವ್ಯಕ್ತಿಯನ್ನು ನೇಮಿಸಿಕೊಂಡಿದ್ದಾರೆ.
ಕೋತಿಗಳು ಹಾಗೂ ಹಂದಿಗಳ ಹಾವಳಿಯನ್ನು ತಪ್ಪಿಸಲು ಒಬ್ಬ ವ್ಯಕ್ತಿಗೆ ಕರಡಿಯ ವೇಷ ಹಾಕಿ, ಹೊಲದ ತುಂಬ ಓಡಾಡಲು ದಿನಕ್ಕೆ 500 ರೂ.ಗಳಂತೆ ತಿಂಗಳಿಗೆ 15,000 ರೂ. ಸಂಬಳಕ್ಕೆ ವ್ಯಕ್ತಿಯನ್ನು ನೇಮಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕರಡಿಯ ವೇಷವನ್ನು ಧರಿಸಲು ಮತ್ತು ಕೋತಿ ಮತ್ತು ಕಾಡುಹಂದಿಗಳನ್ನು ದೂರವಿರಿಸಲು ಹೊಲಗಳಲ್ಲಿ ಈ ತರಹದ ಪ್ರಯೋಗ ಮಾಡುವುದು ಈಗ ಕೃಷಿಕರಿಗೆ ಅನಿವಾರ್ಯವಾಗಿದೆ.
ವರದಿಗಳ ಪ್ರಕಾರ, ರೆಡ್ಡಿ ಅವರು ಹೈದರಾಬಾದಿನ ವೇಷಭೂಷಣ ಪೂರೈಕೆದಾರರಿಂದ ವಿಶೇಷ ಕರಡಿ ಉಡುಪನ್ನು ಪಡೆದುಕೊಂಡರು, ಅವರು ನಾಟಕ ತಂಡಗಳಿಗೆ ಉಡುಪುಗಳನ್ನು ತಯಾರಿಸುತ್ತಾರೆ ಮತ್ತು ಅದಕ್ಕಾಗಿ 10,000 ರೂ.ಗಳನ್ನು ಪಡೆಯುತ್ತಾರೆ. ಇದು ಬೇಸಿಗೆಯ ಉಷ್ಣೆಯಲ್ಲಿ ಧರಿಸಲು ಅನಾನುಕೂಲವಾಗುತ್ತದೆ. ಜೊತೆಗೆ ಪ್ರಾಣಿಗಳನ್ನು ಬೆಳೆಗಳಿಂದ ದೂರ ಇಡಲು ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಡಿ ಸಿಲುಕಿದ ಹಸು ; ಪ್ರಾಣಾಪಾಯದಿಂದ ಪಾರಾಗಿದ್ದೇ ಒಂದು ವಿಸ್ಮಯ..

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement