ಯುಗಾದಿ ದಿನಂದು ಪೆಟ್ರೋಲ್‌-ಡೀಸೆಲ್‌ ಮತ್ತಷ್ಟು ದುಬಾರಿ

ನವದೆಹಲಿ: ಯುಗಾದಿ ಹಬ್ಬದ ದಿನವಾದ ಇಂದು, ಶನಿವಾರ ಕೂಡ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ 80 ಪೈಸೆ ಏರಿಕೆಯಾಗಿದೆ.
ಕೇವಲ 12 ದಿನಗಳಲ್ಲೇ 10ನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು (ಏಪ್ರಿಲ್‌ 2) ಪೆಟ್ರೋಲ್ ಮತ್ತು ಡೀಸೆಲ್​ ಕ್ರಮವಾಗಿ 80​ ಪೈಸೆಯಷ್ಟು ಏರಿಕೆಯಾಗಿದ್ದು, ಕಳೆದ 12 ದಿನಗಳಲ್ಲಿ ಒಟ್ಟು 7.20 ರೂ. ಬೆಲೆ ಏರಿಕೆಯಾಗಿದೆ.

ಇಂಧನ ದರ ಈ ಕೆಳಕಂಡಂತಿದೆ

ಬೆಂಗಳೂರು
ಪೆಟ್ರೋಲ್​: ಪ್ರತಿ ಲೀಟರ್​ಗೆ 108.06 ರೂ.
ಡೀಸೆಲ್​: ಪ್ರತಿ ಲೀಟರ್​ಗೆ 92.09 ರೂ.

ದೆಹಲಿ
ಪೆಟ್ರೋಲ್​: 102.61 ರೂ.
ಡೀಸೆಲ್​: 93.87 ರೂ.

ಮುಂಬೈ
ಪೆಟ್ರೋಲ್​: 117.52 ರೂ.
ಡೀಸೆಲ್​: 101.74

ಚೆನ್ನೈ
ಪೆಟ್ರೋಲ್​: 108.29 ರೂ.
ಡೀಸೆಲ್​: 98.36
ಹೈದರಾಬಾದ್​
ಪೆಟ್ರೋಲ್​: 116.12 ರೂ.
ಡೀಸೆಲ್​: 102.31

ಕೋಲ್ಕತ್ತಾ
ಪೆಟ್ರೋಲ್​: 112.12 ರೂ.
ಡೀಸೆಲ್​: 97.02
ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಈಗ ಏರುಗತಿಯಲ್ಲಿ ಸಾಗಿದೆ. 12 ದಿನದಲ್ಲಿ 10ನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.
ದೇಶೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತಾರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಅಮೆರಿಕ​ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಗರ್ಭಧಾರಣೆ ಕುರಿತ ಪುಸ್ತಕದಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement