ಸಿದ್ಧಗಂಗಾ ಮಠದ ಕಾರ್ಯಕ್ರಮದಲ್ಲಿ ಶೂ ಧರಿಸಿ ಇಬ್ಬರು ಶ್ರೀಗಳ ಮಧ್ಯೆ ಕುಳಿತ ಅಮಿತ್ ಶಾ-ಕಾಂಗ್ರೆಸ್‌ ಟೀಕೆ

ಬೆಂಗಳೂರು: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಗುರುವಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶೂ ಧರಿಸಿ ಕುಳಿತ ಭಂಗಿ ಈಗ ಟೀಕೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸುತ್ತೂರು ಶ್ರೀಗಳು ಮತ್ತು ಸಿದ್ದಗಂಗಾ ಮಠದ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು. ಅಮಿತ್ ಶಾ ಅವರು ಸುತ್ತೂರು ಮತ್ತು ಸಿದ್ಧಗಂಗಾ ಮಠದ ಸ್ವಾಮೀಜಿಗಳ ಮಧ್ಯದ ಆಸನದಲ್ಲಿ ಕುಳಿತಿದ್ದರು. ಆದರೆ ಸ್ವಾಮೀಜಿಗಳಿಬ್ಬರ ಮಧ್ಯೆ ಅವರು ಶೂ ಧರಿಸಿ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡ ಫೋಟೋ ಇದೀಗ ವೈರಲ್ ಆಗಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.

ಬಿಜೆಪಿ ನಾಯಕರಿಗೆ ಸಂಪ್ರದಾಯ, ಶ್ರೀಗಳಿಗೆ ಗೌರವ ಕೊಡುವ ಬಗೆ ಗೊತ್ತಿಲ್ಲವೇ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿದ್ದಗಂಗಾ ಮಠಕ್ಕೆ ಹೋದಾಗ ನಡೆದುಕೊಂಡ ರೀತಿಯ ಬಗ್ಗೆಯೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಕಾಂಗ್ರೆಸ್ಸಿಗರು ಶಾ ಅವರನ್ನು ಟೀಕಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

ಮಠಗಳಿಗೆ ಹೋಗುವಾಗ ಚಪ್ಪಲಿ ತೆಗೆದಿಟ್ಟು ಹೋಗುವುದು ನಾವು ಆ ಸ್ಥಳಕ್ಕೆ ಕೊಡುವ ಗೌರವ. ಪೀಠಾಧಿಪತಿಗಳ ಕಡೆಗೆ ಚಪ್ಪಲಿ ತೋರಿಸಿಕೊಂಡು ಕುಳಿತುಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ. ನಿಮ್ಮ ಸ್ಥಾನ ಮಾನ ಇಲ್ಲಿ ಅಪ್ರಸ್ತುತ. ಬಸವಣ್ಣನವರ ಮನೆಯಲ್ಲಿ ಎಲ್ಲರೂ ಒಂದೇ. ನಕಲಿ ನಂಬಿಕೆ ಮತ್ತು ಅಸಲಿ ನಂಬಿಕೆಯ ನಡುವಿನ ವ್ಯತ್ಯಾಸ ಇದೇ ಎಂದು ಕಾಂಗ್ರೆಸ್ಸಿನ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement