ನೈಸ್ ವಿರುದ್ಧ ಮತ್ತೆ ದೇವೇಗೌಡರ ಆಕ್ರೋಶ: ರಸ್ತೆ ಮಾಡದೇ ಟೋಲ್ ಸಂಗ್ರಹದ ಆರೋಪ

ಬೆಂಗಳೂರು: ನೈಸ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಮತ್ತೆ ಮಾತನಾಡಿದ್ದಾರೆ. ರೈತರ ಜಮೀನು ತೆಗೆದುಕೊಂಡು ಅವರಿಗೆ ಹಣ ನೀಡಿಲ್ಲ. ಅನೇಕರು ಈಗಲೂ ಹಣ ಪಡೆದುಕೊಳ್ಳಲು ಪರಿತಪಿಸುತ್ತಿದ್ದಾರೆ. ಸರ್ಕಾರಿ ಜಮೀನು ಅಡ ಇಟ್ಟಿದ್ದು ಯಾವ ಪುರುಷಾರ್ಥಕ್ಕೆ ಎಂದು ದೇವೇಗೌಡ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ಸಂಸ್ಥೆ ಟೋಲ್ ಹಣವನ್ನು ಸರ್ಕಾರದ ಅನುಮತಿ ‌ಇಲ್ಲದೆ ಹೆಚ್ಚಳ ಮಾಡಿದೆ. ಅದು ಸರ್ಕಾರದ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೈಸ್ ಸಂಸ್ಥೆಗೆ ಕೊಮ್ಮನಗಟ್ಟದ ಬಳಿ‌ ನೀಡಿರುವ 41 ಎಕರೆ ಜಾಗದ ಸೇಲ್ ಡೀಡ್ ರದ್ದುಗೊಳಿಸುವಂತೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ವಿಧಾನ ಪರಿಷತ್​ನಲ್ಲಿ ಈ ವಿಷಯ ಚರ್ಚೆ ಆಗಿದೆ. ಆದರೆ, ಯಾವುದೇ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ. ನಾನು ಅನೇಕ ಪತ್ರಗಳನ್ನು ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಹಾಗೂ ಕೈಗಾರಿಕೆ ಇಲಾಖೆ ಕಾರ್ಯದರ್ಶಿಗೂ ಪತ್ರ ಬರೆದಿದ್ದೇನೆ. ಸರ್ಕಾರ ನೈಸ್ ವಿಚಾರವಾಗಿ ಕಮಿಟಿ‌ ಮಾಡಿದೆ‌. ಕಮಿಟಿಯನ್ನು ಪದೇ‌ ಪದೇ ಬದಲಾವಣೆ ಮಾಡುತ್ತಾ ಹೋದರು. ಸಚಿವ ಮಾಧುಸ್ವಾಮಿ ಈ ಕಂಪನಿ ವ್ಯವಹಾರಗಳು ಸರಿ ಇಲ್ಲ ಎಂದು ಹೇಳಿದ್ದಾರೆ. ಈಗ ಮಾಧುಸ್ವಾಮಿ ಅವರನ್ನೇ ಕಮಿಟಿಯಿಂದ ಕೈ ಬಿಟ್ಟಿದ್ದಾರೆ ಎಂದರು.
ನೈಸ್ ಬಗ್ಗೆ ಸದನ‌ ಸಮಿತಿ ಮಾಡಿದರು. ಸದನ ಸಮಿತಿ ವರದಿ ಕೊಟ್ಟಿದೆ. ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಮೈಸೂರು ರೋಡ್ ಮಾಡಿದ ಮೇಲೆ ಟೌನ್ ಶಿಪ್ ಮಾಡಬೇಕು ಎಂದಿತ್ತು. ಆದರೆ, ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಸದನ ಸಮಿತಿ ಟೋಲ್ ಸಂಗ್ರಹ ರದ್ದು ಮಾಡಿ ಎಂದು ವರದಿ ಕೊಟ್ಟಿತ್ತು. ಆದರೆ 2016 ರಲ್ಲಿ ನೈಸ್ ಸಂಸ್ಥೆ ಅವರು ಹೈಕೋರ್ಟ್ ನಲ್ಲಿ ಸ್ಟೇ ತೆಗೆದುಕೊಂಡಿದ್ದಾರೆ. ಸದನ ಸಮಿತಿಯ ವರದಿ ಮೀರಿ ಟೋಲ್ ಸಂಗ್ರಹ ಆಗಿದೆ. 2016 ರಿಂದ 2022 ರವರೆಗೆ ಟೋಲ್ ಸಂಗ್ರಹ ಮಾಡಿದ್ದಾರೆ. ಪ್ರತಿನಿತ್ಯ 2-3 ಕೋಟಿ ಸಂಗ್ರಹ ಆಗುತ್ತದೆ. ಯಾರಾದರೂ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಕೆಐಎಡಿಬಿ ಜಾಗವನ್ನು ಮೆಟ್ರೋಗೆ 14 ಕೋಟಿ ರೂ. ಗಳೀಗೆ ನೈಸ್ ಸಂಸ್ಥೆ ಮಾರಾಟ ಮಾಡಿದೆ. ಈಗ ಮತ್ತೆ ಮೆಟ್ರೋ ಗೆ ಸುಮಾರು 100 ಕೋಟಿಗೆ ಮಾರಾಟ ಮಾಡಿ ದುಡ್ಡು ಮಾಡಲು ನೈಸ್ ಸಂಸ್ಥೆ ಹೊರಟಿದೆ. ತುಂಬಾ ಆಸೆ ಇಟ್ಟು ಈ ಪ್ರಾಜೆಕ್ಟ್ ಮಾಡಿದ್ದೆ. ಆದರೆ ರೈತರಿಗೆ ನೈಸ್ ಸಂಸ್ಥೆ ಸರಿಯಾಗಿ ಪರಿಹಾರವನ್ನೇ ನೀಡಲಿಲ್ಲ. ಸರ್ಕಾರಿ ಜಮೀನನ್ನು ಅಡ ಇಟ್ಟು ಸಾಲ ಪಡೆದಿದ್ದಾರೆ. ದೇಶದಲ್ಲಿ ಉತ್ತಮ ರಸ್ತೆ ಮಾಡಲು ಈ ಪ್ರಾಜೆಕ್ಟ್ ಆಗಲೇ ಓಕೆ ಮಾಡಿದೆ. ವಿಪರ್ಯಾಸವೆಂದರೆ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ ಹೈಕೋರ್ಟ್ ಗೆ ಸರ್ಕಾರ ಇಷ್ಟು ಅಕ್ರಮ ಮಾಡಿದ್ದಾರೆ ಅಂತ ಅರ್ಜಿ ಹಾಕಬೇಕಿತ್ತು. ಆದರೆ ಯಾವ ಸರ್ಕಾರವೂ ಮಾಡಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಕೂಡ ಸುಪ್ರೀಂಕೋರ್ಟ್ ಆದೇಶ ಪಾಲನೆ‌ ಮಾಡು ಎಂದು ಹೇಳಿದ್ದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಅವರಿಗೂ ಪತ್ರ ಬರೆದಿದ್ದೆ ಈಗ ಬೊಮ್ಮಾಯಿ ಅವರ ಸರ್ಕಾರಕ್ಕೆ ಬಹುಮತ ಇದೆ. ಈಗಲಾದರೂ ಕ್ರಮ ತೆಗೆದುಕೊಳ್ಳಲಿ ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement