ಮಡಿಲಲ್ಲಿ ಪುಟ್ಟ ತಂಗಿಯೊಂದಿಗೆ ತರಗತಿಗಳಿಗೆ ಹಾಜರಾಗುವ 10 ವರ್ಷದ ಮಣಿಪುರದ ಹುಡುಗಿ..! ಅರ್ಪಣಾ ಭಾವಕ್ಕೆ ಶ್ಲಾಘಿಸಿ ಅವಳ ಪದವಿ ವರೆಗಿನ ಶಿಕ್ಷಣದ ಹೊಣೆ ಹೊತ್ತ ಸಚಿವರು

ಇಂಫಾಲ್: ಮಣಿಪುರದ 10 ವರ್ಷದ ಬಾಲಕಿ ಮೈನಿಂಗ್‌ಸಿನ್ಲಿಯು ಪಮೇಯ್ ತನ್ನ ಸಹೋದರಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಶಾಲೆಯಲ್ಲಿ ಕಲಿಯುತ್ತಾಳೆ. 4ನೇ ತರಗತಿಯ ವಿದ್ಯಾರ್ಥಿನಿ, ತನ್ನ ತಂಗಿಯನ್ನು ಮಡಿಲಲ್ಲಿ ಇಟ್ಟುಕೊಂಡು ಪ್ರಾಥಮಿಕ ಶಾಲೆ ತರಗತಿಗಳಿಗೆ ಹಾಜರಾಗುತ್ತಿರುವ ಪಮೇಯ ಫೋಟೋ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್ ಅವರು ಬಾಲಕಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿ ಟ್ವೀಟ್ ಮಾಡಿದ್ದಾರೆ.
“ಶಿಕ್ಷಣಕ್ಕಾಗಿ ಆಕೆಯ ನಿಷ್ಠೆ ನನ್ನನ್ನು ಬೆರಗುಗೊಳಿಸಿದೆ! ಮಣಿಪುರದ ತಮೆಂಗ್‌ಲಾಂಗ್‌ನ ಮೈನಿಂಗ್‌ಸಿನ್ಲಿಯು ಪಮೇಯ್ ಎಂಬ 10 ವರ್ಷದ ಬಾಲಕಿ ತನ್ನ ತಂಗಿಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಶಾಲೆಗೆ ಹೋಗುತ್ತಾಳೆ, ಏಕೆಂದರೆ ಆಕೆಯ ಪೋಷಕರು ಕೃಷಿಗಾಗಿ ಹೊರಗೆ ಹೋಗುತ್ತಾರೆ.

ಪಮೇಯ್ ಗೆ ಬೆಂಬಲ ನೀಡುವ ಪ್ರಯತ್ನದಲ್ಲಿ, ಸಚಿವರು ಹುಡುಗಿಯ ಸಂಬಂಧಿಕರನ್ನು ಸಂಪರ್ಕಿಸಿದರು ಮತ್ತು ತಮ್ಮನ್ನು ಭೇಟಿಯಾಗಲು ಬಾಲಕಿಯನ್ನು ಇಂಫಾಲ್‌ಗೆ ಕರೆತರುವಂತೆ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನಾನು ಈ ಸುದ್ದಿಯನ್ನು ಗಮನಿಸಿದ ತಕ್ಷಣ, ನಾವು ಅವಳ ಕುಟುಂಬವನ್ನು ಪತ್ತೆಹಚ್ಚಿದ್ದೇವೆ ಮತ್ತು ಅವಳನ್ನು ಇಂಫಾಲ್‌ಗೆ ಕರೆತರುವಂತೆ ಹೇಳಿದ್ದೇವೆ. ಅವಳು ಪದವಿ ಪಡೆಯುವ ವರೆಗೆ ಅವಳ ಶಿಕ್ಷಣವನ್ನು ನಾನು ವೈಯಕ್ತಿಕವಾಗಿ ನೋಡಿಕೊಳ್ಳುತ್ತೇನೆ ಎಂದು ಅವಳ ಕುಟುಂಬದೊಂದಿಗೆ ಮಾತನಾಡುವಾಗ ಹೇಳಿದ್ದೇನೆ. ಅವಳ ಸಮರ್ಪಣೆಗೆ ನಮಗೆ ಹೆಮ್ಮೆ ಎಂದು ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವನ್ನೂ ಹೊಂದಿರುವ ಸಿಂಗ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪಮೇಯ ಕುಟುಂಬವು ಉತ್ತರ ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ನೆಲೆಸಿದೆ. ತಮೆಂಗ್ಲಾಂಗ್ ಜಿಲ್ಲೆಯ ಅಧಿಕಾರಿಗಳ ಪ್ರಕಾರ, ಹುಡುಗಿಯ ಪೋಷಕರು ಹಗಲಿನಲ್ಲಿ ತಮ್ಮ ಮನೆಯಿಂದ ಬೇಸಾಯಕ್ಕಾಗಿ ಹೊರಗಿ ಹೋಗುವ ಕಾರಣ, ಸುಮಾರು 2 ವರ್ಷ ವಯಸ್ಸಿನ ತನ್ನ ಸಹೋದರಿಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ತನ್ನ ಪಮೇಯ್‌ ತರಗತಿಗಳಿಗೆ ಹಾಜರಾಗಿದ್ದಳು. ಅವಳು ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯ ಡೈಲಾಂಗ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement