ರಾಜಸ್ಥಾನದ ಹಿಂಸಾಚಾರದಲ್ಲಿ ಬೆಂಕಿ ಕೆನ್ನಾಲಿಗೆಗೆ ಸುಡುತ್ತಿರುವ ಕಟ್ಟಡಗಳ ಮಧ್ಯೆ ಪುಟ್ಟ ಮಗು ಎತ್ತಿಕೊಂಡು ಓಡಿ ರಕ್ಷಣೆ ಮಾಡಿದ ಪೊಲೀಸ್‌ ಪೇದೆ.. ಈ ಹೃದಯಸ್ಪರ್ಶಿ ಘಟನೆಗೆ ಎಲ್ಲೆಡೆ ಪ್ರಶಂಸೆ

ನವದೆಹಲಿ: ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ ಎಂಬುದಕ್ಕೆ ಈ ಫೋಟೋ ಒಂದು ಉತ್ತಮ ನಿದರ್ಶನ. ರಾಜಸ್ಥಾನದ ಹಿಂಸಾಚಾರ-ಪೀಡಿತ ಕರೌಲಿಯ ಈ ಫೋಟೋವು ಗಲಭೆಕೋರರು ಬೆಂಕಿ ಹಚ್ಚಿದ ನಂತರ ಸುಡುತ್ತಿರುವ ಕಟ್ಟಡಗಳ ಮಧ್ಯೆ ರಾಜಸ್ಥಾನದ ಪೊಲೀಸ್ ಪೇದೆಯೊಬ್ಬರು ಪುಟ್ಟ ಮಗುವನ್ನು ಎತ್ತಿಕೊಂಡು ಕಿರಿದಾದ ಕಾಲುದಾರಿಗಳ ಮೂಲಕ ಓಡುತ್ತ ಹಾನಿಯಿಂದ ರಕ್ಷಣೆ ಮಾಡಿದ್ದಕ್ಕೆ ಸಾಕ್ಷಿಯಾಗಿದ್ದು, ಎಲ್ಲಾ ಪ್ರಶಂಸೆಗೆ ಪಾತ್ರವಾಗಿದೆ.
ಶಾಮ್ಲಿ ಎಸ್‌ಎಸ್‌ಪಿ ಸುಕೀರ್ತಿ ಮಾಧವ ಮಿಶ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಚಿತ್ರ, ಕಾನ್‌ಸ್ಟೆಬಲ್ ನೇತ್ರೇಶ್ ಶರ್ಮಾ ತನ್ನ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಓಡುತ್ತಿರುವುದನ್ನು ತೋರಿಸಿದೆ, ಅವರ ಸುತ್ತಲಿನ ಮನೆಗಳು ಬೆಂಕಿಗೆ ಆಹುತಿಯಾಗಿವೆ.

ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಚಿತ್ರವನ್ನು ಹಂಚಿಕೊಳ್ಳುವಾಗ, ಸುಕೀರ್ತಿ ಮಾಧವ ಮಿಶ್ರಾ, “ಅಮೂಲ್ಯ ಜೀವವನ್ನು ಉಳಿಸಿದ್ದಕ್ಕಾಗಿ ರಾಜಸ್ಥಾನ ಪೊಲೀಸರ ಕಾನ್‌ಸ್ಟೆಬಲ್ ನೇತ್ರೇಶ್ ಶರ್ಮಾ ಅವರ ಬಗ್ಗೆ ತುಂಬಾ ಹೆಮ್ಮೆ ಇದೆ. ಈ ಚಿತ್ರವು ಸಾವಿರ ಪದಗಳಿಗೆ ಯೋಗ್ಯವಾಗಿದೆ” ಎಂದು ಹೇಳಿದ್ದಾರೆ.
ಶನಿವಾರ ರಾಜಸ್ಥಾನದ ಕರೌಲಿ ಪ್ರದೇಶದಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಏಪ್ರಿಲ್ 2 ರಂದು ರಾಜಸ್ಥಾನದ ಕರೌಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಭಾಗವಾಗಿ ತೆಗೆದ ಮೋಟಾರ್‌ಸೈಕಲ್ ರ್ಯಾಲಿಯ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 42 ಜನರು ಗಾಯಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ಹಿಂದೂ ಹೊಸ ವರ್ಷದ ಮೊದಲ ದಿನವಾದ ‘ನವ ಸಂವತ್ಸರ’ ಸಂದರ್ಭದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಪರಿಣಾಮವಾಗಿ ಉಂಟಾದ ಹಿಂಸಾಚಾರದಲ್ಲಿ ಗಲಭೆಕೋರರು ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದರು.
ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 30 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಪಿಟಿಐಗೆ ತಿಳಿಸಿದ್ದಾರೆ.
ರಾಜಧಾನಿ ಜೈಪುರದಿಂದ 170 ಕಿಮೀ ದೂರದಲ್ಲಿರುವ ಕರೌಲಿಯಲ್ಲಿ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯ ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಏಪ್ರಿಲ್ 3 ರ ಮಧ್ಯರಾತ್ರಿಯವರೆಗೆ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement