ಹಿರಿಯ ಸಸ್ಯವಿಜ್ಞಾನಿ ಡಾ.ಕೆ ಗೋಪಾಲಕೃಷ್ಣ ಭಟ್ ನಿಧನ

ಉಡುಪಿ: ಹಿರಿಯ ಸಸ್ಯವಿಜ್ಞಾನಿ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ ಗೋಪಾಲಕೃಷ್ಣ ಭಟ್ (75 ) ಗುರುವಾರ (ಏಪ್ರಿಲ್ 7) ಮುಂಜಾನೆ ಚಿಟ್ಪಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲು ಕಾಕುಂಜೆಯವರಾದ ಡಾ.ಕೆ ಗೋಪಾಲಕೃಷ್ಣ ಭಟ್ಟರು 33 ವರ್ಷಗಳ ಕಾಲ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಫ್ಲೋರಾ ಆಫ್ ಉಡುಪಿ, ಫ್ರೋರಾ ಆಫ್ ದಕ್ಷಿಣ ಕನ್ನಡ ಎಂಬ ಬೃಹತ್ ಸಸ್ಯಶಾಸ್ತ್ರೀಯ ನಿಘಂಟು ಸಂಶೋಧನಾ ಗ್ರಂಥಗಳನ್ನು ರಚಿಸಿ ಎರಡು ಜಿಲ್ಲೆಗಳ ಸಮಗ್ರ ಸಸ್ಯ ಪ್ರಬೇಧಗಳ ಬಗ್ಗೆ ಅಮೂಲ್ಯ ಮಾಹಿತಿ ಸಂಗ್ರಹಿಸಿದ್ದರು. ಅವರು ಉಡುಪಿಯಲ್ಲಿ ಕಂಡುಹಿಡಿದ ಅಪೂರ್ವ ಸಸ್ಯಪ್ರಭೇದವೊಂದಕ್ಕೆ ಲಂಡನ್ನಿನ ಪ್ರತಿಷ್ಠಿತ ಬಯೋಲಜಿಕಲ್ ಸೊಸೈಟಿಯು ಅವರ ಹೆಸರನ್ನೇ ಇಟ್ಟು ಗೌರವಿಸಿದ್ದು ಡಾ.ಕೆ. ಗೋಪಾಲಕೃಷ್ಣ ಭಟ್ಟರ ಅನನ್ಯ ಸಾಧನೆಗೆ ನಿದರ್ಶನವಾಗಿದೆ.
ಸಸ್ಯಗಳ ವೈಜ್ಞಾನಿಕ ವರ್ಗೀಕರಣದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಡಾ. ಗೋಪಾಲಕೃಷ್ಣ ಭಟ್ಟರು ಮೂಲತಃ ಕಾಸರಗೋಡಿನ ಕಾಕುಜೆಯವರಾಗಿದ್ದರೂ ಜೀವನದ ಹೆಚ್ಚಿನ ಅವಧಿಯನ್ನು ಉಡುಪಿಯಲ್ಲೇ ಕಳೆದಿದ್ದರು.
ಇತ್ತೀಚಿಗೆ ಪ್ರೊ. ಅರವಿಂದ ಹೆಬ್ಬಾರ್ ರಚಿಸಿದ ‘ಟ್ಯಾಕ್ಸೋನೊಮಿ ಭಟ್ಟರ ಯಾನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ.ಕೆ. ಗೋಪಾಲಕೃಷ್ಣ ಭಟ್‌ ಸನ್ಮಾನಿಸಲಾಗಿತ್ತು.

ಪ್ರಮುಖ ಸುದ್ದಿ :-   ಕೆಎಎಸ್ ಅಧಿಕಾರಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ; ಕಾರಣ ನಿಗೂಢ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement