ಆಕಾರ್ ಪಟೇಲ್‌ ವಿರುದ್ಧದ ಲುಕ್ ಔಟ್ ಸುತ್ತೋಲೆ ಹಿಂಪಡೆಯಲು ಸಿಬಿಐಗೆ ದೆಹಲಿ ಕೋರ್ಟ್‌ ಆದೇಶ; ಲಿಖಿತ ಕ್ಷಮಾಪಣೆಗೆ ಸೂಚನೆ

ಬೆಂಗಳೂರು: ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿ ದಾಖಲಿಸಿದ್ದ ಪ್ರಕರಣದಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಹೊರಡಿಸಲಾದ ಲುಕ್ ಔಟ್ ಸುತ್ತೋಲೆ ಹಿಂಪಡೆಯುವಂತೆ ಸಿಬಿಐಗೆ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಅವರು ಪ್ರಕರಣದ ಅನುಪಾಲನಾ ವರದಿ ಸಲ್ಲಿಸುವಂತೆಯೂ ಸಿಬಿಐಗೆ ಸೂಚಿಸಿದ್ದಾರೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ನ್ಯಾಯಾಲಯವು ಸಿಬಿಐ ನಿರ್ದೇಶಕರಿಗೆ ಅವರ ಅಧೀನ ಅಧಿಕಾರಿಯಿಂದ ಉಂಟಾಗಿರುವ ಲೋಪದ ಕಾರಣಕ್ಕೆ ಅರ್ಜಿದಾರರಿಗೆ (ಆಕಾರ್‌ ಪಟೇಲ್‌) ಕ್ಷಮಾಣಪಣೆ ಪತ್ರ ಬರೆಯುವಂತೆ ಸೂಚಿಸಿದೆ.

ಅಮೆರಿಕಕ್ಕೆ ಪ್ರಯಾಣ ಕೈಗೊಳ್ಳದಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಆಕಾರ್‌ ಅವರನ್ನು ತಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇಂದು, ಗುರುವಾರ ಬೆಳಗ್ಗೆ ನಡೆದ ವಿಚಾರಣೆ ವೇಳೆ ಸಿಬಿಐ ಪರ ವಕೀಲರು, ಎಫ್‌ಸಿಆರ್‌ಎ ನಿಯಮಗಳ ಅಡಿ ಪಟೇಲ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು, ಆದರೆ ಕಾನೂನಿನ ಸೆಕ್ಷನ್ 40 ರ ಅಡಿಯಲ್ಲಿ ಕೇಂದ್ರ ಸರ್ಕಾರದ ಅಗತ್ಯ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿತ್ತು. ಕೇಂದ್ರದ ಅನುಮತಿಯ ನಂತರವೇ ನ್ಯಾಯಾಲಯ ಆರೋಪಪಟ್ಟಿ ಪರಿಣಿಸಬೇಕಾಗುತ್ತದೆ ಎಂದು ಹೇಳಿತ್ತು.
ವಿಚಾರಣೆ ವೇಳೆ ಆಕಾರ್ ಪಟೇಲ್ ಓರ್ವ ಪ್ರಭಾವಿ ವ್ಯಕ್ತಿ. ಅವರನ್ನು ವಿದೇಶಕ್ಕೆ ತೆರಳಲು ಬಿಟ್ಟರೆ ನ್ಯಾಯಾಂಗದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಎಂದು ಸಿಬಿಐ ಹೇಳಿತು.. ಇದಕ್ಕೆ ಕೋರ್ಟ್ 2021ರಿಂದ ಸಿಬಿಐ ತನಿಖೆ ನಡೆಯುತ್ತಿದೆ. ಪಟೇಲ್ ವಿದೇಶಕ್ಕೆ ಪರಾರಿಯಾಗುವ ಅಪಾಯವಿದ್ದಲ್ಲಿ ಅವರನ್ನು ಬಂಧಿಸಬಹುದಿತ್ತು. ಪಲಾಯನವಾಗಬೇಕಿದ್ದರೆ ಅವರು ಬಹಳ ಹಿಂದೆಯೇ ಪಲಾಯನ ಮಾಡಬಹುದಿತ್ತು ಎಂದು ಹೇಳಿದೆ. ಸಿಬಿಐ ನಾಗರಿಕರನ್ನು ತನಿಖೆ ಮಾಡುತ್ತಿದೆ ಎಂದು ಪಟೇಲ್ ಪರ ವಕೀಲರು ವಾದಿಸಿದರು.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement