ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್‌ ಮಾಡಲು ವೀಡಿಯೋ ಮಾಡುತ್ತಿದ್ದ ವೇಳೆ ರೈಲು ಹರಿದು ಮೂವರು ಬಾಲಕರು ಸಾವು

ಚೆನ್ನೈ: ರೈಲ್ವೆ ಹಳಿಯ ಮೇಲೆ ವೀಡಿಯೋ ಶೂಟ್ ಮಾಡುತ್ತಿದ್ದ ಮೂವರಿಗೆ ರೈಲು ಡಿಕ್ಕಿ ಹೊಡೆದು ಮೂವರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಮೃತರನ್ನು ಕೆ.ಮೋಹನ್(17), ಪ್ರಕಾಶ್ (17) ಹಾಗೂ ಎಸ್.ಅಶೋಕ್(24) ಎಂದು ಗುರುತಿಸಲಾಗಿದೆ. ಚೆಂಗಲಪಟ್ಟು ಸಮೀಪದ ರೈಲ್ವೆ ಹಳಿ ಬಳಿ ಇನ್ಸ್ಟಾಗ್ರಾಂಗೆಂದು ವೀಡಿಯೋ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಸ್ಥಳೀಯ ರೈಲು ಬರುತ್ತಿರುವುದನ್ನು ಗಮನಿಸದೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಥಳ ಪರಿಶೀಲನೆ ನಡೆಸಿದ ಚೆಂಗಾಲಪಟ್ಟು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಈ ಮೂವರು ಸ್ನೇಹಿತರಾಗಿದ್ದು, ಚೆಂಗಲಪಟ್ಟು ಬಳಿಯ ಸಿಂಗಪೆರುಮಾಳ್ ಕೋಯಿಲ್ ಬಳಿಯ ಚೆಟ್ಟಿಪುನಯಂ ಪ್ರದೇಶಕ್ಕೆ ಸೇರಿದವರು. ಪ್ರತಿದಿನವೂ ಈ ಮೂವರು ರೈಲ್ವೇ ನಿಲ್ದಾಣದಲ್ಲಿ ಇಂತಹ ವೀಡಿಯೋಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಪಘಾತಕ್ಕೂ ಮುನ್ನ ಮೂವರು ರೈಲ್ವೆ ಹಳಿ ಬಳಿ ನಿಂತು ಶೂಟ್ ಮಾಡಿದ ಕೆಲವು ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಚೆಂಗಲಪಟ್ಟು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಅಚೆಂಗಲಪಟ್ಟು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement