ಮಾಲೀಕನ ಮೇಲೆ ಚಿರತೆ ದಾಳಿ: ಚಿರತೆ ಮೇಲೆ ಪ್ರತಿದಾಳಿ ಮಾಲೀಕನ ರಕ್ಷಿಸಿದ ಶ್ವಾನಗಳು…!

ಶಿವಮೊಗ್ಗ: ನಾಯಿಗಳೆಂದರೆ ನಂಬಿಗೆ ಹಾಗೂ ನಿಯತ್ತು. ಎಂಥದ್ದೇ ಸಂದರ್ಭದಲ್ಲಿಯೂ ಅದು ತನ್ನ ಒಡೆಯನನ್ನು ಬಿಟ್ಟುಕೊಡುವುದಿಲ್ಲ. ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತವೆ. ಇಂಥದ್ದೊಂದು ನಿದರ್ಶನಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಬಿಟ್ಟುಕೊಡುವುದಿಲ್ಲ. ಸೊರಬ ತಾಲೂಕಿನ ಆನವಟ್ಟಿ ಸಮೀಪದ ಎಣ್ಣೆಕೊಪ್ಪದಲ್ಲಿ ಮಾಲೀಕನನ್ನು ಶ್ವಾನಗಳು ಚಿರತೆಯಿಂದ ಕಾಪಾಡಿದ ಘಟನೆ ವರದಿಯಾಗಿದೆ.

ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ಎಣ್ಣೆಕೊಪ್ಪ ಗೊಲ್ಲರ ತಾಂಡಾದ ಬಂಗಾರಪ್ಪ ಅವರ ಮೇಲೆ ಚಿರತೆ ದಾಳಿ ನಡೆಸಿದೆ. ಆದರೆ ಆತನ ಜೊತೆ ತೆರಳಿದ್ದ ಸಾಕು ನಾಯಿಗಳು ಚಿರತೆ ಮೇಲೆ ಪ್ರತಿ ದಾಳಿ ನಡೆಸಿ ಮಾಲೀಕನನ್ನು ಕಾಪಾಡಿದೆ. ಆ ಮೂಲಕ ತನ್ನ ನಿಯತ್ತನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಎಂದಿನಂತೆ ಬಂಗಾರಪ್ಪ ಅವರು ಕಟ್ಟಿಗೆ ತರಲು ಕಾಡಿಗೆ ಹೋಗಿದ್ದರು. ಅವರ ಜತೆಗೆ ಸಾಕು ನಾಯಿಗಳೂ ತೆರಳಿದ್ದವು. ಈ ವೇಳೆ ಚಿರತೆಯೊಂದು ಬಂಗಾರಪ್ಪ ಅವರ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದ್ದು, ಬಂಗಾರಪ್ಪ ಅವರ ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ಬಂಗಾರಪ್ಪ ಅವರ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಮೇಲೆ ಸಾಕು ನಾಯಿಗಳು ಪ್ರತಿದಾಳಿ ನಡೆಸಿವೆ. ಹೆದರಿದ ಚಿರತೆ ಬಂಗಾರಪ್ಪ ಅವರನ್ನು ಬಿಟ್ಟು ಓಡಿ ಹೋಗಿದೆ. ಓಡಿಸಿ ಬಂಗಾರಪ್ಪ ಅವರ ಪ್ರಾಣ ರಕ್ಷಣೆ ಮಾಡಿದ್ದು, ಗಾಯಗೊಂಡಿರುವ ಬಂಗಾರಪ್ಪ ಅವರನ್ನು ಶಿಕಾರಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement