ಸುರತ್ಕಲ್: ಸಮುದ್ರದಲ್ಲಿ ಮುಳುಗಿ ಸಹೋದರಿಯರಿಬ್ಬರು ಸಾವು

ಮಂಗಳೂರು: ಒಂದೇ ಕುಟುಂಬದ ಇಬ್ಬರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಸುರತ್ಕಲ್ ಎನ್‌ಐಟಿಕೆ ಬೀಚ್‌ನಲ್ಲಿ ನಡೆದಿದೆ.
ಮೃತರನ್ನು ಯುವತಿಯರನ್ನು ಮಂಗಳೂರು ಮೂಲದ ತೃಷಾ(17), ವೈಷ್ಣವಿ(18) ಎಂದು ಗುರುತಿಸಲಾಗಿದೆ. ಸಮುದ್ರಕ್ಕಿಳಿದು ಆಟವಾಡುತ್ತಿದ್ದಾಗ ದೊಡ್ಡ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತ ವೈಷ್ಣವಿ ತಂದೆ ವೆಂಕಟೇಶ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಿಧನರಾದ ವೆಂಕಟೇಶ ಅವರ ಮಾವನ ತಿಥಿಯ ಪಿಂಡ ಪ್ರಧಾನ ಮಾಡಲೆಂದು ಕುಟುಂಬಸ್ಥರು ಎನ್‌ಐಟಿಕೆ ಬೀಚಿಗೆ ಬಂದಿದ್ದರು ಎಂದು ಹೇಳಲಾಗಿದ್ದು, ಪಿಂಡ ಪ್ರಧಾನ ಮಾಡಿದ ಬಳಿಕ ವೆಂಕಟೇಶ, ಅವರ ಮಗಳು ವೈಷ್ಣವಿ ಹಾಗೂ ತಮ್ಮನ ಮಗಳು ತ್ರಿಶಾ ಮೂವರು ಸಮುದ್ರಕ್ಕಿಳಿದಿದ್ದರು ಎನ್ನಲಾಗಿದೆ. ತಕ್ಷಣವೇ ಅವರನ್ನು ರಕ್ಷಿಸಿ ಸ್ಥಳಕ್ಕೆ ಧಾವಿಸಿದ ಸುರತ್ಕಲ್ ಠಾಣೆಯ ಹೊಯ್ಸಳ‌ ವಾಹನದಲ್ಲಿ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.‌ ಆದರೆ ದಾರಿಮಧ್ಯೆ ತ್ರಿಶಾ ಹಾಗೂ ವೈಷ್ಣವಿ ಕೊನೆಯುಸಿರೆಳೆದಿದ್ದು, ವೆಂಕಟೇಶ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ‌ ಸಂಬಂಧ ಸುರತ್ಕಲ್ ಪೊಲೀಸರು ಸ್ಥಳಕ್ಕೆ‌ ಧಾವಿಸಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement