100 ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ಶಿಕ್ಷಕ : ಪ್ರಜ್ಞಾಹೀನರಾದ 7 ವಿದ್ಯಾರ್ಥಿನಿಯರು..!

ಒಡಿಶಾದ ಬೋಲಂಗಿರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಶಿಕ್ಷೆಯ ರೂಪದಲ್ಲಿ ಬಸ್ಕಿ ತೆಗೆಸಿದ ನಂತರ ಏಳು ವಿದ್ಯಾರ್ಥಿನಿಯರು ಪ್ರಜ್ಞಾಹೀನರಾಗಿದ್ದು, ನಂತರ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು.
ಬೋಲಂಗಿರ್ ಜಿಲ್ಲೆಯ ಪಟ್ನಾಗರ್ ಪ್ರದೇಶದ ಬಾಪೂಜಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕನನ್ನು ಬಿಕಾಶ್ ಧರುವಾ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಪ್ರಾರ್ಥನಾ ಅವಧಿ ಮುಗಿದ ನಂತರ ತಡವಾಗಿ ಶಾಲೆಗೆ ತಲುಪಿದಕ್ಕೆ 100 ಬಸ್ಕಿ (sit-ups)ಗಳನ್ನು ಮಾಡಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಚಿಸಿದರು. ಆಗ ಕೆಲವು ವಿದ್ಯಾರ್ಥಿಗಳು ಪ್ರಜ್ಞಾಹೀನರಾದರು ಮತ್ತು ಶಾಲಾ ಸಿಬ್ಬಂದಿ ಅವರನ್ನು ನಂತರ ಆಂಬ್ಯುಲೆನ್ಸ್‌ನಲ್ಲಿ ಪಟ್‌ನಗರ ಉಪ-ವಿಭಾಗೀಯ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು.

ಆಸ್ಪತ್ರೆಗೆ ಕರೆತಂದಾಗ ಬಾಲಕಿಯರ ಸ್ಥಿತಿ ಸರಿಯಿರಲಿಲ್ಲ, ಆದರೆ ಪ್ರಾಥಮಿಕ ಚಿಕಿತ್ಸೆ ನಂತರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಟ್ನಾಗಢ ಉಪವಿಭಾಗೀಯ ವೈದ್ಯಾಧಿಕಾರಿ ಪಿತಾಬಾಶ್ ಶಾ ತಿಳಿಸಿದ್ದಾರೆ.
ಏತನ್ಮಧ್ಯೆ, ಶಾಲೆ ಮತ್ತು ಸಮೂಹ ಶಿಕ್ಷಣ (ಎಸ್ & ಎಂಇ) ಸಚಿವ ಸಮೀರ್ ರಂಜನ್ ದಾಸ್‌ ಅವರು ಸೋಮವಾರ ಬಾಪೂಜಿ ಹೈಸ್ಕೂಲ್‌ನ ಏಳು ವಿದ್ಯಾರ್ಥಿನಿಯರಿಗೆ ಶಿಕ್ಷೆ ವಿಧಿಸಿರುವ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಬೋಲಾಂಗಿರ್‌ನ ಪಟ್ನಾಗಢ್ ಪ್ರದೇಶದ ಬಾಪೂಜಿ ಹೈಸ್ಕೂಲ್‌ನಲ್ಲಿ ಕೆಲವು ವಿದ್ಯಾರ್ಥಿನಿಯರಿಗೆ ಶಿಕ್ಷೆ ವಿಧಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ನಾನು ಪಟ್‌ನಗರ್ ಸಮುದಾಯ ಶಿಕ್ಷಣ ಅಧಿಕಾರಿ ಶಂಕರ್ ಪ್ರಸಾದ್ ಮಾಝಿ ಅವರಿಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement