ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್, ಸರ್ಜಿ ಬ್ರಿನ್ ಹಿಂದಿಕ್ಕಿದ ಗೌತಮ್ ಅದಾನಿ ಈಗ ವಿಶ್ವದ 6ನೇ ಅತ್ಯಂತ ಶ್ರೀಮಂತ

ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೌತಮ್ ಅದಾನಿ ಅವರು ಈಗ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಂದರು, ಗಣಿಗಾರಿಕೆ, ಇಂಧನ ಸೇರಿದಂತೆ ಇನ್ನಿತರ ಹಲವಾರು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಅದಾನಿ ಸಂಸ್ಥೆಯ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದ್ದರಿಂದ ಅವರ ಒಟ್ಟು ಆಸ್ತಿ ಮೌಲ್ಯ 118 ಬಿಲಿಯನ್ ಅಮೆರಿಕನ್ ಡಾಲರುಗಳಿಗೆ ಏರಿದ್ದು, ಈಗ ಅವರು ವಿಶ್ವದ 6 ನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಅಲ್ಲದೆ, ವಿಶ್ವದ ದೈತ್ಯ ಸಂಸ್ಥೆಗಳಾದ ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಸರ್ಜಿ ಬ್ರಿನ್ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿದ್ದಾರೆ.

ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್‍ಪ್ರೈಸಸ್, ಅದಾನಿ ಗ್ಯಾಸ್ ಮತ್ತು ಅದಾನಿ ಟ್ರಾನ್ಸ್‍ಮಿಷನ್ ಷೇರುಗಳ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಏರಿಕೆಯಾಗಿರುವುದರಿಂದ ಅದಾನಿ ಅವರ ನಿವ್ವಳ ಅದಾಯ 8.57 ಶತಕೋಟಿ ಡಾಲರ್ ಅಥವಾ 65,091 ಕೋಟಿ ರೂ.ಗಳಿಗೆ ಏರಿಕೆಯಾಗಿರುವುದರಿಂದ ಅದಾನಿ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಬ್ಲೂಮ್‍ಬರ್ಗ್ ಬಿಲಿನೇಯರ್ ಸಂಸ್ಥೆ ತಿಳಿಸಿದೆ.
ಅದಾನಿ ಅವರ ವೈಯಕ್ತಿಯ ಅದಾಯ ಕೂಡ 41.6 ಬಿಲಿಯನ್ ಡಾಲರುಗಳಿಗೆ ಹೆಚ್ಚಳವಾಗಿದೆ. ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಆಸ್ತಿ ಮೌಲ್ಯ 97.4 ಬಿಲಿಯನ್ ಡಾಲರುಗಳಿಗೆ ಏರಿಕೆಯಾಗಿರುವುದರಿಂದ ಅವರು ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ಮುಖೇಶ್ ಅಂಬಾನಿ ಅವರ ಆಸ್ತಿಗಿಂತ ಅದಾನಿ ಅವರ ಆಸ್ತಿ ಮೌಲ್ಯ ಸದ್ಯ 20.6 ಶತಕೋಟಿ ಡಾಲರುಗಳಷ್ಟು ಹೆಚ್ಚಾಗಿದೆ. ಶುದ್ಧ ಶಕ್ತಿ, ಏರ್‍ಪೆಪೋಟ್ಸ್ ಮತ್ತು ಇಂಧನ ಘಟಕಗಳ ಕ್ಷೇತ್ರಕ್ಕೆ ಕಾಲಿಟ್ಟ ಅದಾನಿ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಭಾರಿ ಏರಿಕೆಯಾಗಿರುವುದು ಮಾತ್ರವಲ್ಲದೆ, ಗ್ರೀನ್ ಎನರ್ಜಿ ಸಂಸ್ಥೆಯ ಷೇರಿನಲ್ಲಿ ಶೆ.16.25ರಷ್ಟು ಏರಿಕೆ ಕಂಡು ಬಂದು ಸಂಸ್ಥೆಯ ಮೌಲ್ಯ 4.22 ಲಕ್ಷ ಕೋಟಿಗೆ ಏರಿಕೆಯಾಗಿರುವುದರಿಂದ ಅದಾನಿ ಸಂಸ್ಥೆ ವಿಶ್ವದ 10 ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಲು ಕಾರಣವಾಗಿದೆ.

ಕಳೆದ 14 ವರ್ಷಗಳಿಂದ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದ ಅಂಬಾನಿ ಅವರನ್ನು ಕೆಲ ವರ್ಷಗಳ ಹಿಂದೆ ಫಾರ್ಮಸ್ಯೂಟಿಕಲ್ ದಿಗ್ಗಜ ದಿಲೀಪ್ ಸಂಘ್ವಿ ಹಿಂದಿಕ್ಕಿದ್ದರೂ ಅದರೂ ಕಳೆದ ವಾರ ಅಂಬಾನಿ ಅವರು ಮತ್ತೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು.
ಇದೀಗ ಅದಾನಿ ಅಂಬಾನಿಯವರನ್ನು ಹಿಂದಕ್ಕಿದ್ದಾರೆ. ಅದಾನಿ ಆಸ್ತಿ ಮೌಲ್ಯ 100 ಬಿಲಿಯನ್ ಡಾಲರ್ ದಾಟಿರುವುದರಿಂದ ಅವರು ನೂರು ಬಿಲೇನಿಯರ್ ಕ್ಲಬ್‍ನ ಹೊಸ ಸದಸ್ಯರಾಗಿದ್ದಾರೆ. 1999ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯ ಬಿಲ್‍ಗೇಟ್ಸ್ ಅವರು 100 ಬಿಲೇನಿಯರ್ ಆಸ್ತಿ ಒಡೆಯ ಎಂಬ ಕೀರ್ತಿಗೆ ಪಾತ್ರವಾಗಿದ್ದರು. ಇವರ ನಂತರ 2017ರಲ್ಲಿ ಅಮೆಜಾನ್ ಸಂಸ್ಥೆಯ ಸಂಸ್ಥಾಪಕ ಜೆಫ್ ಬೆಜೋಸ್ ಅವರು 100 ಬಿಲಿಯನ್ ಡಾಲರ್ ಕ್ಲಬ್ ಸೇರಿಕೊಂಡಿದ್ದರು. ಪ್ರಸ್ತುತ 249 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಮಸ್ಕ್ ಅವರು ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಅಲಂಕರಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement