ಚಹಾ ಜೊತೆ ಬೆಳಗಿನ ಉಪಾಹಾರ ಕೊಡಲಿಲ್ಲವೆಂದು ಸೊಸೆಗೆ ತನ್ನ ರಿವಾವಲ್ವರ್‌ನಿಂದ ಗುಂಡು ಹಾರಿಸಿದ ಮಾವ..!

ಥಾಣೆ: ಚಹಾದ ಜೊತೆಗೆ ಉಪಾಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟಿಗೆದ್ದ ಮಾವ ತನ್ನ ರಿವಾಲ್ವರ್‌ನಿಂದ ತನ್ನ ಸೊಸೊಗೆ ಗುಂಡು ಹಾರಿಸಿದ ಘಟನೆ ಥಾಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಥಾಣೆಯ ರಾಬೋಡಿ ಪ್ರದೇಶದ ನಿವಾಸಿ 42 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕಾಶಿನಾಥ ಪಾಂಡುರಂಗ ಪಾಟೀಲ (76) ಎಂಬಾತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಲ್ಲದೆ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ ಎಂದು ರಾಬೋಡಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂತೋಷ್ ಘಾಟೇಕರ್ ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಆರೋಪಿಯ ಕಾಶಿನಾಥ ಪಾಂಡುರಂಗ ಪಾಟೀಲನ ಮತ್ತೊಬ್ಬ ಸೊಸೆ ನೀಡಿದ ದೂರನ್ನು ಉಲ್ಲೇಖಿಸಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸೊಸೆ ಚಹಾದ ಜೊತೆಗೆ ಉಪಾಹಾರವನ್ನು ನೀಡದಿದ್ದಾಗ ಮಾವ ಸಿಟ್ಟಾಗಿದ್ದಾನೆ. ನಂತರ ರಿವಾಲ್ವರ್ ಅನ್ನು ಹೊರತೆಗೆದು ತನ್ನ ಸೊಸೆಯ ಮೇಲೆಯೇ ಗುಂಡು ಹಾರಿಸಿದ್ದಾನೆ, ಆಕೆಯ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಗಾಯಗೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಘಾಟೇಕರ್ ತಿಳಿಸಿದ್ದಾರೆ.
ಇತರ ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ದಾಳಿಗೆ ಬೇರೆ ಯಾವುದೇ ಪ್ರಚೋದನೆ ಇದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಘಾಟೇಕರ್ ಹೇಳಿದರು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದ ಎಡಬ್ಲ್ಯುಎಸಿಎಸ್‌ (AWACS) ವಿಮಾನ ನಾಶವಾಗಿದ್ದನ್ನು ಒಪ್ಪಿಕೊಂಡ ಪಾಕ್‌ ನಿವೃತ್ತ ಏರ್ ಮಾರ್ಷಲ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement