ಹನುಮ ಜಯಂತಿ ದಿನವೇ ಹುಬ್ಬಳ್ಳಿ ಬುಡರಸಿಂಗಿ ಆಂಜನೇಯ ಮೂರ್ತಿ ಕಣ್ಣಿಂದ ಅನೇಕ ಬಾರಿ ಜಿನುಗಿದ ನೀರು…!: ಭಕ್ತರಿಗೆ ಅಚ್ಚರಿ…ವೀಕ್ಷಿಸಿ

ಹುಬ್ಬಳ್ಳಿ: ಹನುಮ ಜಯಂತಿ ದಿನವೇ ಧಾರಾವಾಡ ಜಿಲ್ಲೆಯ ಬುಡರಸಿಂಗಿy ಆಂಜನೇಯ ಮೂರ್ತಿಯಲ್ಲಿನ ಕಣ್ಣಿನಿಂದ ನೀರು ಬಿದ್ದ ಅಚ್ಚರಿಯ ಘಟನೆ ನಡೆದ ವರದಿಯಾಗಿದೆ.
ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಹುನುಮ ಜಯಂತಿ ದಿನವೇ ಹನುಮಂತನ ಮೂರ್ತಿ ಕಣ್ಣಿಂದ ನೀರು ಬರುತ್ತಿದ್ದು ಜನರ ಅಚ್ಚರಿಗೆ ಕಾರಣವಾಗಿದೆ.

ಈ ಆಂಜನೇಯ ದೇವಸ್ಥಾನ ಸುಮಾರು 700 ವರ್ಷಗಳ ಇತಿಹಾಸವಿದ್ದು, ಈ ದೇವಸ್ಥಾನವನ್ನು ಜಕಣಾಚಾರಿ ಕಟ್ಟಿದ್ದಾರೆಂಬ ಪ್ರತೀತಿ ಗ್ರಾಮದಲ್ಲಿದೆ.ಇತಿಹಾಸ ಪ್ರಸಿದ್ಧ ‌ ಹನುಮ ದೇವಸ್ಥಾನದಲ್ಲಿ ಈ ಘಟನೆಗೆ ಇಡೀ ಗ್ರಾಮಕ್ಕೆ ಗ್ರಾಮವೇ ಚಕಿತ ಗೊಂಡಿದ್ದು, ಎಲ್ಲರೂ ದೇವಸ್ಥಾನದಕ್ಕೆ ಆಗಮಿಸುತ್ತಿದ್ದಾರೆ.

ಪ್ರತಿ ವರ್ಷ ಹನುಮ ಜಯಂತಿ ದಿನದಂದು ಇಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವರ್ಷವೂ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಹನುಮ ಜಯಂತಿ ಹಿನ್ನೆಲೆ ಹನುಮ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ಮುಂದಾದಾಗ ಹನುಂತನ ಕಣ್ಣಿನಲ್ಲಿ ನೀರು ಹನಿ ಹನಿಯಾಗಿ ಬೀಳುತ್ತಿರುವ ದೃಶ್ಯ ಕಂಡು ಬಂದಿದೆ. ಇದನ್ನು ಕಂಡ ಅರ್ಚಕರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಆ ಬಳಿಕ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಟ್ಟೆಯಿಂದ ಕಣ್ಣನ್ನು ಒರೆಸಿದರೂ ನೀರು ಬರುತ್ತಲೇ ಇದೆ ಅನೇಕರು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement