ಫೆಡರೇಷನ್ ಕಪ್ ಕುಸ್ತಿ : ಧಾರವಾಡದ ಕುಸ್ತಿಪಟು ಮೊಹ್ಮದ್ ರಫೀಕ್ ಹೊಳಿಗೆ ಚಿನ್ನ

ಧಾರವಾಡ: ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಇತ್ತೀಚೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಸಿದ 2022ನೇ ಸಾಲಿನ ಫೆಡರೇಷನ್ ಕಪ್ (ಸೀನಿಯರ್) ಫ್ರೀಸ್ಟೈಲ್, ಗ್ರೀಕೋ ರೋಮನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಧಾರವಾಡ ಮೊಹ್ಮದ್ ರಫೀಕ್ ಹೊಳಿ ಚಿನ್ನದ ಪದಕ ಗೆದ್ದಿದ್ದಾರೆ.
ಗ್ರೀಕೋ ರೋಮನ್ ವಿಭಾಗದಲ್ಲಿ ರಫೀಕ್ 77 ಕೆಜಿ ವರ್ಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯ್ಲಿ ರಫೀಕ್ ಭಾರತೀಯ ಸೇನೆಯ ಎಸ್‍ಎಸ್‍ಬಿಸಿ ತಂಡವನ್ನು ಪ್ರತಿನಿಧಿಸಿದ್ದರು.
ಅಂತಿಮ ಪಂದ್ಯದಲ್ಲಿ ಅವರು ಹರಿಯಾಣದ ಸೋನು ಅವರನ್ನು 7-3 ಅಂಕಗಳಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

4 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದಿಂದ ಸ್ಪರ್ಧೆ ; ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್

ನಿಮ್ಮ ಕಾಮೆಂಟ್ ಬರೆಯಿರಿ

advertisement