ಸರ್ಕಾರ ನೀಡಿದ ಅನುದಾನ ಪಡೆಯಲು ಮಠಗಳೂ ಅಧಿಕಾರಿಗಳಿಗೆ 30% ಕಮೀಷನ್​ ಕೊಡ್ಬೇಕು : ದಿಂಗಾಲೇಶ್ವರ ಶ್ರೀ

ಬಾಗಲಕೋಟೆ : ಮಠಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಿದೆ. ಇಲ್ಲವಾದಲ್ಲಿ ಹಣವೇ ಬಿಡುಗಡೆ ಆಗುವುದಿಲ್ಲ, ಭ್ರಷ್ಟಾಚಾರದ ಪರಿಸ್ಥಿತಿ ಇಷ್ಟರಮಟ್ಟಕ್ಕೆ ಬಂದು ನಿಂತಿದೆ ಎಂದು ಶಿರಹಟ್ಟಿ ಶ್ರೀ ಫಕ್ಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಕೃಷ್ಣಾ, ಮಹಾದಾಯಿ ಹಾಗೂ ನವಲಿ ನೀರಾವರಿ ಯೋಜನೆ ಜಾರಿಗಾಗಿ ಮಾಜಿ ಸಚಿವ ಎಸ್.ಆರ್.ಪಾಟೀಲ ಅವರ ನೇತೃತ್ವದಲ್ಲಿ ಐದು ದಿನಗಳ‌ ಕಾಲ ಸಂಕಲ್ಪ ಯಾತ್ರೆ ಕ ಹಮ್ಮಿಕೊಳ್ಳಲಾಗಿತ್ತು. ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಗ್ರಾಮದಲ್ಲಿ ನಡೆದ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಮಠ-ಮಾನ್ಯಗಳು ಸರ್ಕಾರ ನೀಡಿದ ಅನುದಾನ ಪಡೆಯಬೇಕಾದರೆ 30% ಕಮಿಷನ್ ಕೊಡಬೇಕು. ಅನುದಾನದಲ್ಲಿ ಅಧಿಕಾರಿಗಳು ಕಡಿತ ಮಾಡದೆ ಅನುದಾನ ನೀಡುವುದಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಹಣ ಬಿಡುಗಡೆಯಾದರೆ ಅದು ಐಸ್ಕ್ರೀಂ ಕರಗಿ ಕೇವಲ ಕೇವಲ ಕಡ್ಡಿ ಮಾತ್ರ ಉಳಿಯುವಂತೆ ಅಧಿಕಾರಗಳಿಂದ ಅನುದಾನ ಬಿಡುಗಡೆಯಾಗಿ ಬರುವಾಗಲೂ ಇದೇ ಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement