ಬೆಂಗಳೂರಿನಲ್ಲಿ ಇನ್ಮುಂದೆ ದಿನದ 24 ಗಂಟೆಯೂ ಹೋಟೆಲ್​ಗಳು ಓಪನ್..!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇನ್ಮುಂದೆ ದಿನದ 24 ಗಂಟೆಯೂ ಹೊಟೇಲ್​ಗಳು ತೆರೆಯಲಿವೆ. ಇಡೀ ರಾತ್ರಿ ಊಟ-ತಿಂಡಿ ಸಿಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, 24/7 ಎಲ್ಲ ಹೊಟೇಲ್, ಬೇಕರಿ, ಸ್ವೀಟ್ಸ್ ಸ್ಟಾಲ್, ಐಸ್‌‌ಕ್ರಿಂ ಶಾಪ್ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಈ ಟವಿ ಭಾರತ ಕನ್ನಡ.ಕಾಮ್‌ ವರದಿ ಮಾಡಿದೆ. ವರದಿ ಪ್ರಕಾರ, ಬೆಂಗಳೂರಿನಲ್ಲಿ ಹಗಲು-ರಾತ್ರಿ ದುಡಿಯುವ ಜನರು ಬಹಳ ಇದ್ದಾರೆ. ಆದರೆ, ರಾತ್ರಿ 11 ಗಂಟೆಯಾದ ನಂತರ ಊಟ ಸಿಗುವುದು ಕಷ್ಟವಾಗಿತ್ತು. ಯಾಕೆಂದರೆ ರಾತ್ರಿ ವೇಳೆ ಹೊಟೇಲ್‌ಗಳಿಗೆ ತೆರೆಯಲು ಅವಕಾಶವೇ ಅನುಮತಿ ಇರಲಿಲ್ಲ. ಆದರೆ, ಈಗ ದಿನದ 24 ಗಂಟೆಯೂ ಹೊಟೇಲ್ ತೆರೆಯಲು ಸರ್ಕಾರ ಈಗ ಅವಕಾಶ ನೀಡಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಅನುಕೂಲಕ್ಕಾಗಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಸರ್ಕಾರದ ಆದೇಶ ಸ್ವಾಗತಿಸಿರುವ ಬೃಹತ್ ಬೆಂಗಳೂರು ಹೊಟೇಲ್‌ಗಳ ಸಂಘ, ಪೊಲೀಸ್ ಇಲಾಖೆಯ ಅನುಮತಿಗೆ ಕಾಯುತ್ತಿವೆ. ಈ ಕುರಿತಿ ಪೊಲೀಸ್ ಇಲಾಖೆಗೆ ಅನುಮತಿ ಕೋರಿ ಹೊಟೇಲ್‌ ಸಂಘದಿಂದ ಪತ್ರ ಬರೆಯಲಾಗಿದೆ‌. ಪೊಲೀಸ್ ಇಲಾಖೆಯ ಅನುಮತಿ ಸಿಕ್ಕ ತಕ್ಷಣವೇ ಹೋಟೆಲ್‌ಗಳಲ್ಲಿ 24/7 ಸೇವೆ ಆರಂಭವಾಗಲಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement