ಅವಿವಾಹಿತೆಯೊಂದಿಗೆ ವಿವಾಹಿತ ಪುರುಷ ಪಲಾಯನ; ಪೊಲೀಸ್ ಹುಡುಕಾಟದ ವೆಚ್ಚದ 50%ರಷ್ಟು ಪಾವತಿಸಲು ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಯುವತಿಯನ್ನು ಪುಸಲಾಯಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ವಿವಾಹಿತನೋರ್ವನಿಗೆ ಆಕೆಯನ್ನು ಹುಡುಕಲು ಸರ್ಕಾರ ಭರಿಸಿದ ವೆಚ್ಚದ ಅರ್ಧ ಭಾಗದಷ್ಟು ನೀಡುವಂತೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ.
ಏಳು ತಿಂಗಳ ಹಿಂದೆ ಆರೋಪಿ ರಘಭಾಯ್​ ಪರ್ಮಾರ್​ ಜೊತೆ 20 ವರ್ಷದ ಯುವತಿ ಪರಾರಿಯಾಗಿದ್ದಳು. ಮಗಳ ಪತ್ತೆಗಾಗಿ ಯುವತಿ ಪೋಷಕರು ಹೈಕೋರ್ಟ್​ ಮೊರೆ ಹೋಗಿದ್ದರು. ಬಳಿಕ ಕೋರ್ಟ್​ ಪೊಲೀಸರಿಗೆ ಆದೇಶ ನೀಡಿದ್ದ ಕಾರಣ ಇವರಿಬ್ಬರನ್ನು ಹುಡುಕಾಡಲು ಪೊಲೀಸರು ಸಾಕಷ್ಟು ಶ್ರಮ ಪಟ್ಟಿದ್ದರು. ಆದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಏಳು ತಿಂಗಳ ಬಳಿಕ ಪತ್ತೆಯಾದ ಇಬ್ಬರನ್ನೂ ಮರಳಿ ಕರೆ ತರಲಾಗಿತ್ತು.

ಇಬ್ಬರ ಹುಡುಕಾಟ, ಕೋರ್ಟ್ ಸೇರಿದಂತೆ ವಿವಿಧೆಡೆಗೆ ಅಲೆದಾಟ, ಯುವತಿಯನ್ನು ಮರಳಿ ಅವರ ಕುಟುಂಬಕ್ಕೆ ಒಪ್ಪಿಸುವಿಕೆ ಸೇರಿ ಒಟ್ಟು 1,17,500 ರೂ. ಖರ್ಚಾಗಿದೆ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಒಟ್ಟು ಖರ್ಚಾದ ಮೊತ್ತದಲ್ಲಿ ಅರ್ಧದಷ್ಟು ಹಣವನ್ನು ಯುವಕನೇ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ವಸೂಲಿ ಆದೇಶವು ಅವಿವಾಹಿತ ಹುಡಿಗಿಯ ಜೊತೆ ಓಡಿಹೋಗಿದ್ದಕ್ಕಾಗಿ ಮತ್ತು ಮದುವೆಯಾಗಿದ್ದರೂ ಸಹ ಅವಳನ್ನು ಶೋಷಣೆ ಮಾಡಿದ್ದಕ್ಕೆ ಆರೋಪಿಗೆ ಶಿಕ್ಷೆ ನೀಡಿದೆ.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement