ತಾಯಿ-ಮಗನ ಆತ್ಮಹತ್ಯೆ: ಮುಖ್ಯಮಂತ್ರಿ ಕೆಸಿಆರ್ ಪಕ್ಷದ 6 ಮುಖಂಡರ ಬಂಧನ

ಕಾಮರೆಡ್ಡಿ: ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಆತನ ತಾಯಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಆರು ಮುಖಂಡರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ಇಂದು, ಬುಧವಾರ ತಿಳಿಸಿದ್ದಾರೆ.
ಟಿಆರ್‌ಎಸ್ ಮುಖಂಡರು ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಗಂಗಮ್ ಸಂತೋಷ್ ಮತ್ತು ಅವರ ತಾಯಿ ಗಂಗಮ್ಮ ಪದ್ಮಾ ಏಪ್ರಿಲ್ 16 ರಂದು ಕಾಮರೆಡ್ಡಿಯ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಬೆಂಕಿ ಹಚ್ಚಿಕೊಳ್ಳುವ ಮುನ್ನ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ರಾಮಯಂಪೇಟೆ ಪುರಸಭೆ ಅಧ್ಯಕ್ಷ ಪಲ್ಲೆ ಜಿತೇಂದರ್ ಗೌಡ್, ಇತರ ಐವರು ಟಿಆರ್ ಎಸ್ ಮುಖಂಡರು, ಸರ್ಕಲ್ ಇನ್ಸ್ ಪೆಕ್ಟರ್ ನಾಗಾರ್ಜುನ ರೆಡ್ಡಿ ಸೇರಿದಂತೆ ಏಳು ಮಂದಿ ತನಗೆ ಚಿತ್ರಹಿಂಸೆ ನೀಡಿದ್ದಾಗಿ ಸಂತೋಷ್ ಹೆಸರಿಸಿ ಫೋಟೋ ಹಾಕಿದ್ದರು.

ಸಂತೋಷ್ ಡೆತ್‌ ನೋಟ್‌ ಸಹ ಬರೆದಿಟ್ಟಿದ್ದಾರೆ. ಪತ್ರವನ್ನು ಬರೆದಿಟ್ಟಿದ್ದಾರೆ, ಇವರು ತನ್ನ ವ್ಯವಹಾರಕ್ಕೆ ಹಾನಿ ಮಾಡಿದ್ದಾರೆ ಮತ್ತು ತನ್ನ ಜೀವನವನ್ನು ಕಷ್ಟಕರವಾಗಿಸಿದ್ದಾರೆ.” ಅವರಿಂದಾಗಿ ಆರ್ಥಿಕವಾಗಿ ಹಾಳಾಗಿದ್ದೇನೆ’ ಎಂದು ಅವರು ಡೆತ್‌ನೋಟ್‌ ಬರೆದಿದ್ದು, ತಾವು ಸತ್ತ ನಂತರವಾದರೂ ತಮಗೆ ನ್ಯಾಯ ಸಿಗಲಿ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸರ್ಕಲ್ ಇನ್ಸ್‌ಪೆಕ್ಟರ್ ತನ್ನ ಫೋನ್ ತೆಗೆದುಕೊಂಡು ಹೋಗಿದ್ದರು ಎಂದು ಸಂತೋಷ್ ಆರೋಪಿಸಿದ್ದಾರೆ, ನಂತರ ಇನ್ಸ್‌ಪೆಕ್ಟರ್ ತನ್ನ ಫೋನ್‌ನಿಂದ ಗೌಪ್ಯ ಮಾಹಿತಿ ಹೊರತೆಗೆದ ನಂತರ ಹಿಂತಿರುಗಿಸಿದ್ದಾನೆ.
ಅವರು ಈ ಮಾಹಿತಿಯನ್ನು ಟಿಆರ್‌ಎಸ್ ನಾಯಕರಿಗೆ ರವಾನಿಸಿದ್ದು, ಅವರು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂತೋಷ್‌ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದ್ದು, ಆರೋಪದ ಕುರಿತು ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗೆ ಆದೇಶಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement