ಬರುವ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ: ಮೇ 16ರಿಂದ ಶಾಲೆಗಳು ಆರಂಭ, ದಸರಾ ರಜೆ 14 ದಿನ, ಏಪ್ರಿಲ್ 11ರಿಂದ ಬೇಸಿಗೆ ರಜೆ

ಬೆಂಗಳೂರು: ಮಕ್ಕಳು ಸದ್ಯ ಬೇಸಿಗೆ ರಜೆ ಮಜಾ ಅನುಭವಿಸುತ್ತಿದ್ದಾರೆ. ಮೇ 15ರವರೆಗೆ ಬೇಸಿಗೆ ರಜೆಯಿದ್ದು, ಮೇ 16ರಿಂದ ಶಾಲೆ ಮತ್ತೆ ಆರಂಭವಾಗಲಿದೆ. ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಮಾರ್ಗಸೂಚಿ ಅನ್ವಯವಾಗುತ್ತದೆ ಎಂದು ತಿಳಿಸಿದೆ.

ಈ ಶೈಕ್ಷಣಿಕ ವರ್ಷದಲ್ಲಿ 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲು ಇಡಲಾಗಿದೆ. ಈ ವರ್ಷದ ದಸರಾಗೆ 14 ದಿನ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

2022-23ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಮೊದಲ ಅವಧಿಯಲ್ಲಿ ಮೇ 16ರಿಂದ ಅಕ್ಟೋಬರ್ 2ರ ವರೆಗೆ ಶಾಲಾ ತರಗತಿಗಳು ನಡೆಯುತ್ತವೆ. ಅಕ್ಟೋಬರ್ 3ರಿಂದ ಅಕ್ಟೋಬರ್ 16ರವರೆಗೆ ದಸರಾ ರಜೆ ಇರುತ್ತದೆ. ಎರಡನೇ ಅವಧಿಯಲ್ಲಿ ಅಕ್ಟೋಬರ್ 17ರಿಂದ 2023 ರ ಏಪ್ರಿಲ್ 10ರ ವರೆಗೆ ತರಗತಿಗಳು ನಡೆಯುತ್ತವೆ. 2022 ಏಪ್ರಿಲ್ 11ರಿಂದ 2023 ಮೇ 28ರವರೆಗೆ ಬೇಸಿಗೆ ರಜೆ ಇರುತ್ತದೆ. ಈ ಕ್ಯಾಲೆಂಡರ್ ರಾಜ್ಯದ ಎಲ್ಲ ಶಾಲೆಗಳಲ್ಲಿ ಅನ್ವಯವಾಗುತ್ತದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

 

ಮೇ 16 – ಶಾಲೆಗಳು ಪ್ರಾರಂಭ
ಮೇ 16 ರಿಂದ 20 – ಶಾಲಾ ದಾಖಲಾತಿ ಪ್ರಕ್ರಿಯೆ
ಮೇ 17 ರಿಂದ 31 – ಕಲಿಕಾ ಚೇತರಿಕೆ ಕಾರ್ಯಕ್ರಮ
ಜೂನ್ 1 – ಪ್ರಸಕ್ತ ಸಾಲಿನ ಪಠ್ಯ ಬೋಧನೆಗೆ ಚಾಲನೆ
ಅಕ್ಟೋಬರ್ 3 ರಿಂದ 16 – ದಸರಾ ರಜೆ
ಏಪ್ರಿಲ್ 11ರಿಂದ ಮೇ 28ರ ವರೆಗೆ ಬೇಸಿಗೆ ರಜೆ

ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆಯೇ ಆಗಿಲ್ಲ. ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿತ್ತು. ಈ ವೇಳೆ ಮಕ್ಕಳಿಗೆ ಆನ್​ಲೈನ್​ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಕಲಿಕೆ ಗುಣಮಟ್ಟದಾಗಿರಲಿಲ್ಲ. ಹೀಗಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ಕಲಿಕೆಯಲ್ಲಿ ಹಿನ್ನೆಡೆ ಉಂಟಾಗಿದೆ. ಹೀಗಾಗಿ ಎಲ್ಲಾ ಶಾಲೆಗಳಲ್ಲಿ ಮಾರ್ಗಸೂಚಿಯನ್ನ ಅನುಷ್ಠಾನಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಪ್ರಕಟಿಸಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement