ಲಕ್ಷಾಂತರ ಮೀನುಗಳ ಪ್ರವಾಹ ಎದುರಿಸಿ ಈಜುತ್ತಿರುವ ನಾಲ್ಕು ದೈತ್ಯ ಶಾರ್ಕ್‌ಗಳು..! ವೀಡಿಯೊ ನೋಡಿ ಬೆರಗಾದ ಇಂಟರ್ನೆಟ್‌..!

ಸಮುದ್ರದ ಮಧ್ಯದಲ್ಲಿರುವ ಮೀನಿನ ಪ್ರವಾಹದ ಮೂಲಕ ಶಾರ್ಕ್‌ಗಳಿಗೆ ನಡುಕ ಉಂಟಾಗುವಂತೆ ಭಾಸವಾಗುವ ದೃಶ್ಯದ ವೀಡಿಯೊ ಈಗ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ

ಈ ರೀತಿಯ ಬೆರಗುಗೊಳಿಸುವ ವೀಡಿಯೊವನ್ನು 64 ವರ್ಷದ ಉದ್ಯಮಿ ಹರ್ಷ ಗೋಯೆಂಕಾ ಅವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. . ಹವಾಮಾನ ಪ್ರಚಾರಕ ಮೈಕ್ ಹುಡೆಮಾ ಅವರು ಆರಂಭದಲ್ಲಿ ಹಂಚಿಕೊಂಡ ವೀಡಿಯೊವನ್ನು ಹರ್ಷ ಗೋಯೆಂಕಾ ಅವರು ಹಂಚಿಕೊಂಡಿದ್ದು, ನೀವು ಯಾರೂ ಈ ತರಹದ ದೃಶ್ಯ ನೋಡಿಲ್ಲ ಎಂದು ನಾವು ಬೆಟ್‌ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಇದು 2೦ ಲಕ್ಷ ವೀಕ್ಷಣೆಗಳನ್ನು ಹೊಂದಿದೆ.
ನ್ಯೂಯಾರ್ಕ್ ಬಳಿ ಮೀನಿನ ಬೃಹತ್ ಗುಂಪಿನ ಮೂಲಕ ಶಾರ್ಕ್‌ಗಳು ಈಜುತ್ತಿರುವ ಕುತೂಹಲಕಾರಿ ದೃಶ್ಯವನ್ನು ಡ್ರೋನ್ ಕ್ಯಾಮರಾ ಸೆರೆ ಹಿಡಿದಿದೆ.

ಸಮುದ್ರದ ಮಧ್ಯದಲ್ಲಿರುವ ಈಜುತ್ತಿರುವ ನಾಲ್ಕು  ದೈತ್ಯ ಶಾರ್ಕ್‌ಗಳಿಗೆ ಲಕ್ಷಾಂತರ ಮೀನುಗಳು ಹೇಗೆ ದಾರಿ ಮಾಡಿಕೊಟ್ಟವು ಎಂಬುದನ್ನು ವೀಡಿಯೊ ತೋರಿಸುತ್ತದೆ. ಇದು ಡ್ರೋನ್ ತುಣುಕಾಗಿದೆ ಮತ್ತು ನಿಜ ಜೀವನದಲ್ಲಿ ಈ ರೀತಿಯದನ್ನು ವೀಕ್ಷಿಸುವುದು ಖಂಡಿತವಾಗಿಯೂ ಬಹಳ ದುರ್ಲಭ ಎಂದು ಅವರು ಹೇಳಿದ್ದಾರೆ. ಈ ವೀಡಿಯೋ ನೋಡಿದ ನಂತರ ಇಂಟರ್ನೆಟ್ ಕೂಡ ಅಷ್ಟೇ ಬೆಚ್ಚಿ ಬಿದ್ದಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement