ಜಿಗ್ನೇಶ್ ಮೇವಾನಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್, 3 ದಿನಗಳ ಪೊಲೀಸ್ ಕಸ್ಟಡಿ

ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯವು ಗುರುವಾರ, ಏಪ್ರಿಲ್ 21 ರಂದು ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರ ಜಾಮೀನು ಅರ್ಜಿ ತಿರಸ್ಕರಿಸಿತು ಮತ್ತು ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ನಾಥುರಾಮ್ ಗೋಡ್ಸೆ ಅವರ ಕುರಿತಾದ ಎರಡು ಟ್ವೀಟ್‌ಗಳು ವೈರಲ್ ಆಗಿದ್ದು, “ಶಾಂತಿಯನ್ನು ಕದಡುವ ಅಪಾಯವನ್ನುಂಟುಮಾಡುತ್ತವೆ” ಎಂದು ಆರೋಪಿಸಿ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬುಧವಾರ ತಡರಾತ್ರಿ (ಏಪ್ರಿಲ್‌ 20) ಗುಜರಾತ್‌ನಿಂದ ಬಂಧಿಸಿ ಕರೆತಂದಿದ್ದಾರೆ.
ಕಾನೂನಿನ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಟ್ವಿಟರ್ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಸಂಚಾಲಕರೂ ಆಗಿರುವ ಜಿಗ್ನೇಶ ಅವರ ಎರಡು ಟ್ವೀಟ್‌ಗಳನ್ನು ತಡೆಹಿಡಿದಿದೆ.

ಏತನ್ಮಧ್ಯೆ, ನ್ಯಾಯಾಲಯದ ಆದೇಶದ ನಂತರ ಮೇವಾನಿ ಅವರ ವಕೀಲರು, ಜಾಮೀನು ಕೋರಿ ಹೈಕೋರ್ಟ್‌ಗೆ ತೆರಳಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ಗುರುವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮೇವಾನಿ ಅವರ ಗುರುತು ಅಥವಾ ಬಂಧನದ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದರು. ಬಂಧನಕ್ಕೆ ವಿವರವಾದ ಕಾರಣಗಳನ್ನು ಹಂಚಿಕೊಳ್ಳಲು ಅಸ್ಸಾಂ ಪೊಲೀಸರು ನಿರಾಕರಿಸಿದ್ದಾರೆ.
ಗುರುವಾರ ಮೇವಾನಿ ಅವರನ್ನು ನ್ಯಾಯಾಲಯದ ಕೋಣೆಗೆ ಕರೆದೊಯ್ಯುತ್ತಿದ್ದಾಗ ಮೇವಾನಿ ಅವರು, ತನ್ನ ಬಂಧನ ಸೇಡಿನ ರಾಜಕೀಯವಾಗಿದೆ ಮತ್ತು ಇದು ಪ್ರಧಾನ ಮಂತ್ರಿ ಕಚೇರಿಯಿಂದ” ಆಗಿದೆ ಎಂದು ಆರೋಪಿಸಿದರು.
ಅಸ್ಸಾಂಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೇವಾನಿ, ‘ದೇಶದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ ಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ನಾನು ಶಾಂತಿಗಾಗಿ ಮನವಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟ ಮಧ್ಯೆ ಪಾಕ್‌ ಜತೆ ಟ್ರಂಪ್ ಕುಟುಂಬದ ರಹಸ್ಯ ಕ್ರಿಪ್ಟೋ ಒಪ್ಪಂದ...! ಇದಕ್ಕೆ ಪಾಕ್‌ ಸೇನಾ ಮುಖ್ಯಸ್ಥರ ಮಧ್ಯಸ್ಥಿಕೆ ?!

ಬಂಧನದ ಬಗ್ಗೆ ನನ್ನ ಕುಟುಂಬ ಸದಸ್ಯರಿಗೆ ತಿಳಿಸಲು ನನಗೆ ಅವಕಾಶ ನೀಡಲಿಲ್ಲ. ಇದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ, ಒಬ್ಬ ವ್ಯಕ್ತಿ ತಾನ್ನ ಮೇಲೆ ಎಫ್‌ಐಆರ್‌ನಲ್ಲಿ ಮಾಡಲಾದ ಆರೋಪಗಳನ್ನು ತಿಳಿದುಕೊಳ್ಳಲು ಅರ್ಹನಾಗಿದ್ದಾನೆ” ಎಂದು ಅವರು ಹೇಳಿದರು.
ಮೇವಾನಿ ಬಂಧನವನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದು, ರಾಹುಲ್ ಗಾಂಧಿ ಟ್ವೀಟ್ ಮಾಡಿ, “ಮೋದಿ ಜೀ, ನೀವು ರಾಜ್ಯ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಯತ್ನಿಸಬಹುದು. ಆದರೆ ನೀವು ಎಂದಿಗೂ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೀಶ್ ಠಾಕೂರ್ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ನಾಯಕರು ಗುರುವಾರ ಮುಂಜಾನೆ 3:30 ರ ಸುಮಾರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಮೇವಾನಿ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement