ಪಿಎಸ್‌ಐ ನೇಮಕಾತಿ ಹಗರಣ : ಅಕ್ರಮಕ್ಕೆ ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿ ಮೊಬೈಲ್ ಬಳಸಿದ ಅಂಶ ಬೆಳಕಿಗೆ

ಕಲಬುರಗಿ : ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ಹಗರಣಲ್ಲಿ ತನಿಖೆ ಮಾಡಿದಷ್ಟು ಹೊಸ ಸಂಗತಿಗಳು ಹೊರಬೀಳುತ್ತಿವೆ.
ಈಗ ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಮೊಬೈಲ್ ಬಳಸಿ ಕಿಂಗ್‌ಪಿನ್ ಆರ್‌ ಡಿ ಪಾಟೀಲ್ ಅಕ್ರಮ ಎಸೆಗಿದ್ದಾನೆ ಎಂಬ ಅಂಶ ಹೊರಗೆ ಬಂದಿದೆ ಎಂದು ಹೇಳಲಾಗಿದೆ.

ಬ್ಲೂ ಟೂತ್ ಬಳಸಿ ಪರೀಕ್ಷೆ ಬರೆಸಿದ ಆರೋಪ ಎದುರಿಸುತ್ತಿರುವ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಬಳಿ ಸೊನ್ನ ಗ್ರಾಮದ ಲಕ್ಷ್ಮಿಪುತ್ರ ಎಂಬಾತ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೋವಿಡ್‌ನಿಂದ ಮೃತಪಟ್ಟ ಬಳಿಕ ಅವರ ಎರಡು ಮೊಬೈಲ್‌ಗಳಲ್ಲಿ ಒಂದು ಮೊಬೈಲ್‌ ಆರ್‌ಡಿ ಪಾಟೀಲ ಇಟ್ಟುಕೊಂಡಿದ್ದನಂತೆ. ಅದೇ ಮೊಬೈಲ್‌ನಿಂದ ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ ಎಂಬ ಸಂಗತಿ ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳಿಗೆ ತಿಳಿದು ಬಂದಿದೆ.

ತಮ್ಮ ಬಳಿಯಿರುವ ಮೊಬೈಲ್ ಬಳಸಿದರೆ ಪ್ರಕರಣದಲ್ಲಿ ತನಗೆ ಕಂಟಕ ಬರಬಹುದೆಂಬ ಸತ್ತವರ ಹೆಸರಿನಲ್ಲಿರುವ ಮೊಬೈಲ್ ಬಳಕೆ ಮಾಡಲಾಗಿದೆ. ಈಗ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಎರಡು ದಿನಗಳ ಹಿಂದೆ ಆರ್‌.ಡಿ ಪಾಟೀಲ್ ಹಾಗೂ ಸ್ನೇಹಿತ ಮಂಜುನಾಥ ಮಲ್ಲುಗೌಡನನ್ನ ಸಿಐಡಿ ಬಂಧಿಸಿತ್ತು.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement