ಕಣ್ಣ ಮುಚ್ಚಾಲೆ ಆಟವಾಡುವಾಗ ಐಸ್‌ಕ್ರೀಂ ಫ್ರೀಜರ್‌ನಲ್ಲಿ ಅವಿತುಕೊಂಡ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವು

ನಂಜನಗೂಡು : ಕಣ್ಣ ಮುಚ್ಚಾಲೆ ಆಟವಾಡುವಾಗ ಐಸ್‌ಕ್ರೀಂ ಫ್ರೀಜರ್‌ನಲ್ಲಿ ಅವಿತುಕೊಳ್ಳಲು ಹೋಗಿ ಬಾಗಿಲು ಬಂದ್‌ ಆಗಿದ್ದರಿಂದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಾಲೂಕಿನ ಮಸಗೆ ಗ್ರಾಮದಲ್ಲಿ ಬುಧವಾರ ನಡೆದ ಬಗ್ಗೆ ವರದಿಯಾಗಿದೆ.
ಮೃತ ಬಾಲಕಿಯರನ್ನು ಗ್ರಾಮದ ನಾಗರಾಜ ನಾಯಕ ಅವರ ಪುತ್ರಿ ಭಾಗ್ಯ (12) ಹಾಗೂ ರಾಜು ನಾಯಕ ಪುತ್ರಿ ಕಾವ್ಯಾ (5) ಎಂದು ಗುರುತಿಸಲಾಗಿದೆ.

ಗ್ರಾಮದ ನಿವಾಸಿಯೊಬ್ಬರು ಐಸ್‌ಕ್ರೀಂ ಮಾರಾಟಕ್ಕಾಗಿ ವಾಹನದಲ್ಲಿ ಫ್ರೀಜರ್‌ ಇಟ್ಟಿದ್ದು, ಅದನ್ನು ನಾಗರಾಜ ಅವರ ಮನೆ ಸಮೀಪ ನಿಲ್ಲಿಸಿದ್ದರು ಎಂದು ಹೇಳಲಾಗಿದೆ.
ಬುಧವಾರ ಆಟವಾಡುತ್ತಿದ್ದ ಮಕ್ಕಳು ಫ್ರೀಜರ್‌ ಬಾಗಿಲು ತೆರೆದು ಒಳಗಡೆ ಇಳಿದು ಬಾಗಿಲು ಮುಚ್ಚಿಕೊಂಡಿದ್ದಾರೆ. ಈ ವೇಳೆ ಬಾಗಿಲು ಲಾಕ್‌ ಆಗಿದ್ದರಿಂದ ಅದನ್ನು ತೆಗೆಯಲು ಅವರಿಂದ ಸಾಧ್ಯವಾಗಿಲ್ಲ. ಅವರು ಒಳಗಡೆ ಇಳಿಯುವುದನ್ನು ಯಾರೂ ಗಮನಿಸಿದ ಕಾರಣ ಇಬ್ಬರು ಬಾಲಕಿಯರು ಒಳಗಡೆಯೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಎರಡು ಗಂಟೆ ಕಳೆದರೂ ಮಕ್ಕಳು ಕಾಣದಿದ್ದಾಗ ಮನೆಯವರು ಹುಡುಕಾಟ ನಡೆಸಿದಾಗ ಇಬ್ಬರೂ ಫ್ರೀಜರಿನಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement