ಕರ್ನಾಟಕದಲ್ಲಿ ಬುಧವಾರ ಹೊಸದಾಗಿ 126 ಮಂದಿಗೆ ಕೊರೊನಾ ಸೋಂಕು, ಬೆಂಗಳೂರಿನಿಂದಲೇ ಬಹುತೇಕ ಪ್ರಕರಣಗಳು

ಬೆಂಗಳೂರು: ಕೋವಿಡ್ ಸೋಂಕು ನಿಧಾನವಾಗಿ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ (ಬುಧವಾರ) ಬೆಂಗಳೂರಿನಲ್ಲಿ 114 ಜನರಿಗೆ ಸೋಂಕು ಸೇರಿದಂತೆ ಕರ್ನಾಟಕದಲ್ಲಿ 126 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ.

ಈ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ, ಧಾರವಾಡ, ಕೋಲಾರ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ವಿಜಯಪುರದಲ್ಲಿ ನಾಲ್ವರಿಗೆ, ಬೆಂಗಳೂರು ನಗರದಲ್ಲಿ 114 ಮಂದಿ ಸೇರಿದಂತೆ ರಾಜ್ಯದಲ್ಲಿ 126 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಹೇಳಿದೆ.
ಇದೇವೇಳೆ ಇಂದು 99 ಮಂದಿ ಜನರು ಗುಣಮುಖರಾಗಿದ್ದಾರೆ. ಈಗ ರಾಜ್ಯದಲ್ಲಿ 1,713 ಸಕ್ರಿಯ ಪ್ರಕರಣಗಳಿವೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

ನಿಮ್ಮ ಕಾಮೆಂಟ್ ಬರೆಯಿರಿ

advertisement