ಮದುವೆ ಕಾರ್ಯಕ್ರಮದಲ್ಲಿ ಜೀವಂತ ನಾಗರ ಹಾವಿನೊಂದಿಗೆ ‘ನಾಗಿನ್ ಡ್ಯಾನ್ಸ್’ : ಐವರು ಪೊಲೀಸ್‌ ವಶಕ್ಕೆ…ವೀಕ್ಷಿಸಿ

ಜೀವಂತ ನಾಗರಹಾವು ಬಳಸಿ ಮದುವೆ ಮೆರವಣಿಗೆಯಲ್ಲಿ ‘ಮೈನ್ ನಾಗಿನ್’ ಹಾಡಿಗೆ ನೃತ್ಯ ಮಾಡಿದ ಐವರನ್ನು ಒಡಿಶಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವು ಬುಧವಾರ ಮಯೂರ್‌ಭಂಜ್ ಜಿಲ್ಲೆಯ ಕರಂಜಿಯಾ ಪಟ್ಟಣದ ಬೀದಿಗಳಲ್ಲಿ ಬಾರಾತಿಗಳು ತಮ್ಮ ಬಿದಿರಿನ ಬುಟ್ಟಿಯ ಮುಚ್ಚಳವನ್ನು ತೆರೆದು ಹಾವನ್ನು ಪ್ರದರ್ಶಿಸುವ ಮೂಲಕ ಬಾಡಿಗೆಗೆ ಪಡೆದ ಹಾವಿನೊಂದಿಗೆ ನೃತ್ಯ ಮಾಡುವುದನ್ನು ತೋರಿಸಿದೆ.
ಘಟನಾ ಸ್ಥಳದಿಂದ ಭಯಭೀತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಬ್ಬಂದಿಯೊಬ್ಬರು ಸ್ಥಳಕ್ಕಾಗಮಿಸಿ ನಾಗರ ಹಾವನ್ನು ರಕ್ಷಿಸಿದ್ದಾರೆ.

ನಾಗರಹಾವನ್ನು ಮದುವೆ ನೃತ್ಯಕ್ಕೆ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಹಾವಾಡಿಗ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಾರಣೆ ನಡೆಯುತ್ತಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1982ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೀಡಿಯೋದಲ್ಲಿ ಹೆಚ್ಚಿನ ಡೆಸಿಬಲ್ ಸಂಗೀತದಿಂದ ಹಾವು ಭಯಗೊಂಡಂತೆ ಕಂಡುಬಂದಿದೆ ಎಂದು ಸ್ನೇಕ್ ಹೆಲ್ಪ್‌ಲೈನ್ ಸಂಚಾಲಕ ಸುವೆಂದು ಮಲ್ಲಿಕ್ ಹೇಳಿದ್ದಾರೆ.
“ಹಾವಾಡಿಗ ನಾಗರಹಾವಿನ ವಿಷಪೂರಿತ ಹಲ್ಲುಗಳನ್ನು ತೆಗೆದಿರಬೇಕು, ಇದು ಕಾನೂನುಬಾಹಿರವಾಗಿದೆ. ಇಂತಹ ಹೇಯ ಕೃತ್ಯಕ್ಕೆ ಅವಕಾಶ ನೀಡಿದ ವರ ಮತ್ತು ಅವರ ತಂದೆಯ ವಿರುದ್ಧ ಕಠಿಣ ಕ್ರಮಕ್ಕೆ ನಾನು ಒತ್ತಾಯಿಸುತ್ತೇನೆ. ಇದು ದೇಶದ ಮೊದಲ ಪ್ರಕರಣಗಳಲ್ಲಿ ಒಂದಾಗಿರಬಹುದು.” ಅವರು ಹೇಳಿದರು.

ಪ್ರಮುಖ ಸುದ್ದಿ :-   ಇದೆಂಥ ವಿಚಿತ್ರ | ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಜೀವಂತ-ಓಡಾಡುತ್ತಿದ್ದ 1 ಅಡಿ ಉದ್ದದ ಹಾವುಮೀನು..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement