ಮಾಜಿ ಪತ್ನಿ, ಮಗಳನ್ನು ಕೊಂದ ನಂತರ, ತಾನೂ ಗುಂಡು ಹಾರಿಸಿಕೊಂಡು ಸತ್ತ…!

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಚಿಕ್ಕ ಮಗಳು ಮತ್ತು ಮಾಜಿ ಪತ್ನಿಗೆ ಗುಂಡು ಹಾರಿಸಿ ನಂತರ ತನ್ನ ಮೇಲೆಯೇ ಬಂದೂಕಿನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಪಾಟ್ನಾದಲ್ಲಿ ನಡೆದಿದೆ.
ಹಗಲು ಹೊತ್ತಿನಲ್ಲಿ ರಸ್ತೆಯೊಂದರಲ್ಲಿ ನಡೆದ ಈ ಘಟನೆಯ ಆಘಾತಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಘಟನೆಯ ವೀಡಿಯೊ ತುಣುಕಿನಲ್ಲಿ, ವ್ಯಕ್ತಿ, ಪಿಸ್ತೂಲ್ ಹಿಡಿದುಕೊಂಡು, ಮೂವರು ಮಹಿಳೆಯರನ್ನು ನಿಲ್ಲಿಸಿ ಅವರೊಂದಿಗೆ ಜಗಳವಾಡುತ್ತಿರುವುದು ಕಾಣುತ್ತದೆ.
ನಂತರ ಇದ್ದಕ್ಕಿದ್ದಂತೆ, ಅವನು ಹುಡುಗಿಯ ತಲೆಗೆ ಗನ್ ತೋರಿಸಿ ಟ್ರಿಗರ್ ಅನ್ನು ಎಳೆಯುತ್ತಾನೆ. ಅವಳು ನೆಲಕ್ಕೆ ಬೀಳುತ್ತಿದ್ದಂತೆ, ಅವನು ವಯಸ್ಸಾದ ಮಹಿಳೆಯ ತಲೆಗೆ ಗುಂಡು ಹಾರಿಸುತ್ತಾನೆ ಮತ್ತು ನಂತರ ಸ್ವತಃ ಗುಂಡು ಹಾರಿಸಿಕೊಳ್ಳುತ್ತಾನೆ.

ದಾಳಿ ನಡೆಸಿದವನನ್ನು ರಾಜೀವಕುಮಾರ್ ಎಂದು ಗುರುತಿಸಲಾಗಿದೆ. ಆತನ ಮಾಜಿ ಪತ್ನಿ ಶಶಿಪ್ರಭಾ ಮತ್ತೆ ಮದುವೆಯಾಗಿದ್ದಳು. ಆತ ಗುಂಡಿಟ್ಟ ಹುಡುಗಿ ಸಂಸ್ಕೃತಿ, ಅವನ ಮೊದಲ ಮದುವೆಯ ಮಗಳು. ಆಘಾತಕ್ಕೊಳಗಾಗಿ ರಸ್ತೆಯಲ್ಲೇ ಕುಸಿದು ಬೀಳುತ್ತಿರುವ ಮೂರನೇ ಮಹಿಳೆ ಶಶಿಪ್ರಭಾ ಅವರ ತಾಯಿ ಎಂದು ಗುರುತಿಸಲಾಗಿದೆ.
ಬೇಗುಸರಾಯ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಅವರು ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

ಆರಂಭದಲ್ಲಿ ರಾಜೀವಕುಮಾರ್ ಶಶಿಪ್ರಭಾ ಅವರ ಸಹೋದರಿಯನ್ನು ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಸಹಜ ಮರಣದ ನಂತರ ಶಶಿಪ್ರಭೆಯನ್ನು ಮದುವೆಯಾದ. ನಂತರ ಸಂಬಂಧ ಹಳಸಿದಾಗ, ಶಶಿಪ್ರಭಾ ವಿಚ್ಛೇದನ ನೀಡಿದ್ದಳು ಮತ್ತು ಸಂಸ್ಕೃತಿ ತನ್ನ ಮಲತಾಯಿಯೊಂದಿಗೆ ವಾಸಿಸಲು ನಿರ್ಧರಿಸಿದಳು.
ನಂತರ, ಶಶಿಪ್ರಭಾ ಅವರು ವಾಯುಪಡೆಯಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ವಿವಾಹವಾದರು. ಕುಟುಂಬವು ಪಾಟ್ನಾದ ಉನ್ನತ ಪೊಲೀಸ್ ಕಾಲೋನಿ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿತ್ತು.
ರಾಜೀವ್ ಕುಮಾರ್ ಮಹಿಳೆ ಮತ್ತು ಅವಳ ಮಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವ್ಯಕ್ತಿ ಮಾನಸಿಕ ಅಸ್ಥಿರತೆ ತೋರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಮಧ್ಯಾಹ್ನ 12:40 ರ ಸುಮಾರಿಗೆ ನಮಗೆ ಮಾಹಿತಿ ಸಿಕ್ಕಿತು. ಇದು ಅತ್ಯಂತ ಗಂಭೀರವಾದ ಘಟನೆ ಆದ್ದರಿಂದ ಪ್ರದೇಶದ ಎಲ್ಲಾ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ನಾವು ಕೊಲೆಗೆ ಸಾಕ್ಷಿಯಾದ ಹಲವಾರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ್ದೇವೆ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸ್ಕ್ಯಾನ್ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement