ಸುದೀಪ್ ಹೇಳಿದ್ದು ಸರಿ ಇದೆ: ರಾಷ್ಟ್ರ ಭಾಷೆ ವಿಚಾರದಲ್ಲಿ ಕನ್ನಡದ ಸೂಪರ್ ಸ್ಟಾರ್ ಸುದೀಪ್ ಬೆಂಬಲಕ್ಕೆ ನಿಂತ ಸಿಎಂ ಬೊಮ್ಮಾಯಿ

ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಅಜಯ್ ದೇವಗನ್ ಮತ್ತು ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ನಡುವಿನ ಟ್ವಿಟ್ಟರ್ ಜಗಳದ ನಂತರ ರಾಷ್ಟ್ರ ಭಾಷೆಯ ಬಗ್ಗೆ ವಿವಾದ ಭುಗಿಲೆದ್ದ ಒಂದು ದಿನದ ನಂತರ, ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಸುದೀಪ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಭಾಷೆಗಳಿಂದಲೇ ನಮ್ಮ ರಾಜ್ಯಗಳು ರೂಪುಗೊಂಡಿವೆ. ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ, ಹಾಗೂ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಹೇಳಿದ್ದಾರೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದ ನಂತರ ಎಲ್ಲವೂ ಮಾತೃಭಾಷೆ ಆಗಿದೆ. ಹೀಗಾಗಿ ಸುದೀಪ್ ಹೇಳಿಕೆ ಸರಿಯಾಗಿದೆ, ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ.

ವಿಕ್ರಾಂತ್ ರೋಣ ನಟ ‘ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ’ ಎಂದು ಸಂದರ್ಶನವೊಂದರಲ್ಲಿ ಹೇಳಿದ ನಂತರ ಬಾಲಿವುಡ್ ಸೂಪರ್‌ಸ್ಟಾರ್ ಅಜಯ್ ದೇವಗನ್ ಕನ್ನಡದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಹೇಳಿಕೆಗೆ ಟ್ವೀಟ್‌ ಮಾಡಿ, ಹಿಂದು ರಾಷ್ಟ್ರ ಭಾಷೆ ಅಲ್ಲವೆಂದಾದರೆ ನೀವು ನಿಮ್ಮ ಸಿನೆಮಾವನ್ನು ಹಿಂದಿಯಲ್ಲೇಕೆ ಡಬ್‌ ಮಾಡುತ್ತೀರಿ ಎಂದು ಕೇಳಿದ್ದರು. ಅಜಯ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಹಿಂದಿ ಯಾವಾಗಲೂ ರಾಷ್ಟ್ರ ಭಾಷೆ ಆಗಿತ್ತು, ಇದೆ ಮತ್ತು ಇರುತ್ತದೆ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

ಇದಕ್ಕೆ ಸುದೀಪ್‌ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ, ನಾನು ಬೇರೆಯದ್ದೇ ಅರ್ಥದಲ್ಲಿ ಹೇಳಿದ್ದೆ, ನೀವು ಅದನ್ನು ತಪ್ಪಾಗಿ ಅರ್ಥೈಯಿಸಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ಅಲ್ಲದೆ, ನಾನು ಹಿಂದಿ ಸೇರಿದಂತೆ ಎಲ್ಲ ಭಾಷೆಯನ್ನೂ ಗೌರವಿಸುತ್ತೇನೆ. ನನಗೆ ಹಿಂದಿ ತಿಳಿದಿದ್ದರಿಂದಲೇ ನಾನು ನಿಮ್ಮ ಟ್ವೀಟ್‌ಗೆ ಉತ್ತರಿಸಿದ್ದೇನೆ. ನನಗೆ ಹಿಂದಿ ಮೇಲೆಯೂ ಗೌರವವಿದೆ. ಅದಕ್ಕಾಗಿಯೇ ನಿಮ್ಮ ಟ್ವೀಟ್‌ ನನಗೆ ಅರ್ಥವಾಗಿದೆ. ಎಂದು ಹೇಳಿದ್ದರು. ಅಲ್ಲದೆ ನಾವೂ ಸಹ ಭಾರತೀಯರಲ್ಲವೇ ಎಂದು ಕೇಳಿದ್ದರು. ನಂತರ ನಿಮ್ಮ ಹಿಂದಿ ಟ್ವೀಟ್‌ಗೆ ನಾನು ಕನ್ನಡದಲ್ಲಿ ಟ್ವೀಟ್‌ ಮಾಡಿದ್ದರೆ ಏನಾಗುತ್ತಿತ್ತು ಎಂದು ಯೋಚಿಸುತ್ತಿದ್ದೆ ಎಂದು ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿದ್ದರು ಹಾಗೂ ಇಲ್ಲಿಗೆ ಈ ವಿಷಯವನ್ನು ಅಂತ್ಯ ಹಾಡೋಣ ಎಂದು ಹೇಳಿದ್ದರು.
ಈಗ ಈ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಧ್ವನಿಗೂಡಿಸಿದ್ದು ನಟ ಸುದೀಪ ಹೇಳಿಕೆ ಸರಿಯಾಗಿದೆ ಎಂದು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement