ಹುಬ್ಬಳ್ಳಿ ಗಲಭೆ ಆರೋಪಿಗಳಿಗೆ ಶಾಸಕ ಜಮೀರ್‌ ಅಹಮ್ಮದ್‌ ಉಡುಗೊರೆ ನೀಡುತ್ತಿರುವುದೇಕೆ? – ಬಿಜೆಪಿ ಪ್ರಶ್ನೆ

ಬೆಂಗಳೂರು: ಹಳೇ ಹುಬ್ಬಳ್ಳಿ ಗಲಭೆ ಆರೋಪಿಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ ಶಾಸಕ ಜಮೀರ್‌ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಗಲಭೆ ನಡೆಸಿದ್ದಕ್ಕಾಗಿಯೇ ಈ ಉಡುಗೊರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ” ಹುಬ್ಬಳ್ಳಿಯ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ನೇರವಾಗಿ ಗಲಭೆಯಲ್ಲಿ ಭಾಗಿಯಾಗಿರುವುದು ದೃಢ ಪಟ್ಟಿದೆ. ಹುಬ್ಬಳ್ಳಿ ಗಲಭೆಗೆ ಮೀರ್‌ಸಾದಿಕ್‌ ಅವರಿಂದ ನೀಲನಕ್ಷೆ ತಯಾರಾಗಿತ್ತದೆಯೇ ? ಈಗ, ಗಲಭೆಯ ಆರೋಪಿಗಳಿಗೆ ಸಿದ್ದರಾಮಯ್ಯ ಅವರ ಆಪ್ತ ಜಮೀರ್‌ ಅಹ್ಮದ್‌ ಉಡುಗುರೆಗಳನ್ನು ನೀಡುತ್ತಿದ್ದಾರೆ. ಗಲಭೆ ನಡೆಸಿದ್ದಕ್ಕಾಗಿ ಈ ಉಡುಗೊರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪರವಾಗಿ ಮಾತನಾಡಿದ ಸಿದ್ದರಾಮಯ್ಯ, ಚಂದ್ರು ಕೊಲೆಯ ಆರೋಪಿಗಳ ಬಗ್ಗೆ ಮೃದು ಧೋರಣೆ ತೋರಿದರು.ಈಗ ಹುಬ್ಬಳ್ಳಿ ಗಲಭೆಕೋರರಿಗೆ ಮೀರ್‌ಸಾದಿಕ್‌ ಆಪ್ತ ಭಕ್ಷೀಸು ನೀಡುತ್ತಿದ್ದಾರೆ. ಗಲಭೆಗಳೆಲ್ಲವೂ ಕಾಂಗ್ರೆಸ್‌ ಪ್ರೇರಿತ ಜಿಹಾದ್ ಅಲ್ಲದೆ ಮತ್ತೇನು? ಹುಬ್ಬಳ್ಳಿ ಗಲಭೆಯ ಆರೋಪಿಗಳಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ ? ಸಿದ್ದರಾಮಯ್ಯನವರೇ, ಗಲಭೆಗೂ ಮುನ್ನ ಯಾವೆಲ್ಲಾ ರೀತಿಯ ನೆರವು ನೀಡಿದ್ದೀರಿ? ಸಿದ್ದರಾಮಯ್ಯ ಅವರೇ, ನಿಮ್ಮ ಶಿಷ್ಯ ಆರೋಪಿಗಳ ಪರವಾಗಿರುವುದು ಅಪರಾಧವಲ್ಲವೇ ಎಂದು ಬಿಜೆಪಿ ಕುಟುಕಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ಮಂಗಳೂರು ಸಿಎಎ ಗಲಭೆ, ಡಿಜೆ ಹಳ್ಳಿ , ಪಾದರಾಯನಪುರ ಗಲಭೆ , ಹಿಜಾಬ್‌ ಗಲಭೆ, ಹುಬ್ಬಳ್ಳಿ ಗಲಭೆ ಇದೆಲ್ಲವೂ ಕಾಂಗ್ರೆಸ್‌ ಪ್ರಾಯೋಜಿತ ಜಿಹಾದ್‌. ಪ್ರತಿ ಗಲಭೆಯ ಆರೋಪಿಗಳಿಗೆ ಕೆಪಿಸಿಸಿ ಹಾಗೂ ಮೀರ್‌ಸಾದಿಕ್‌ ಅವರಿಂದ ಆರ್ಥಿಕ, ಕಾನೂನಾತ್ಮಕ ನೆರವು ಲಭಿಸುತ್ತಿರುವುದೇಕೆ ಎಂದು ಪ್ರಶ್ನಿಸಿದೆ.
ರಂಜಾನ್ ಹಿನ್ನಲೆಯಲ್ಲಿ ಹುಬ್ಬಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಕುಟುಂಬಕ್ಕೆ ಫುಡ್ ಕಿಟ್ ಹಾಗೂ ೫ ಸಾವಿರ ರೂ ಸಹಾಯಧನ ನೀಡಲು ಶಾಸಕ ಜಮೀರ್ ಮುಂದಾಗಿದ್ದಾರೆ ಹಾಗೂ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈಗ ಬಿಜೆಪಿ ಗಲಭೆ ಆರೋಪಿಗಳಿಗೆ ಈ ರೀತಿ ಉಡುಗೊರೆ ಕೊಡುವುದರ ಬಗ್ಗೆ ಪ್ರಶ್ನಿಸಿದೆ.

ಪ್ರಮುಖ ಸುದ್ದಿ :-   ತಾಳಿ ಕಟ್ಟುವ ವೇಳೆ ಮದುವೆಗೆ ನಿರಾಕರಿಸಿದ ವಧು : ಮಂಟಪದಲ್ಲೇ ಮುರಿದು ಬಿತ್ತು ಮದುವೆ…!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement