ಜೈಪುರ : ವರದಕ್ಷಿಣೆ ಕೊಡದ ಸಿಟ್ಟಿಗೆ ಪತಿಯೇ ತನ್ನ ಪತ್ನಿ ಮೇಲೆ ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ ಆತಂಕಕಾರಿ ಘಟನೆ ರಾಜಸ್ಥಾನದ ಭರತಪುರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಪತ್ನಿ ತವರು ಮನೆಯವರು1.5 ಲಕ್ಷ ರೂ. ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಪತಿ ಈ ದುಷ್ಕೃತ್ಯ ಎಸಗಿದ್ದಾನೆ. ಅಲ್ಲದೆ ಅತ್ಯಾಚಾರದ ವೀಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಯೂ ಟ್ಯೂಬ್‌ಗೆ ಈ ವೀಡಿಯೊ ಅಪ್ಲೋಡ್ ಮಾಡಿ ವರದಕ್ಷಿಣೆ ಹಣ ಪಡೆಯುವುದಾಗಿ ಪತಿ ಪತ್ನಿಗೆ ಹೇಳಿದ್ದಾನೆ. ಈಗ ಪತ್ನಿ ತನ್ನ ಪತಿ ಮತ್ತು ಇಬ್ಬರು ಸಂಬಂಧಿಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಭರತಪುರದ ಕಮಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದೌಲತ್ ಸಾಹು ಮಹಿಳೆ ದೂರು ದಾಖಲಿಸಿದ್ದಾರೆ. ಆದರೆ ಯೂಟ್ಯೂಬ್‌ಗೆ ವೀಡಿಯೊ ಅಪ್ಲೋಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಇನ್ನೂ ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಯೂಟ್ಯೂಬ್‌ನಿಂದ ಅಪ್‌ಲೋಡ್ ಮಾಡುವ ಮೂಲಕ ವರದಕ್ಷಿಣೆ ಹಣವನ್ನು ಪಡೆಯುವುದಾಗಿ ಪತಿ ಹೆಸರಿಸಿದ್ದಾನೆ ಎಂದು ಪತ್ನಿ ಹೇಳಿದ್ದಾಳೆ. ತಾನು ಹಿಂದಿರುಗಿದ ನಂತರ, ಪತಿ ತನ್ನ ಇಬ್ಬರು ಸಂಬಂಧಿಕರನ್ನು ಮನೆಗೆ ಕರೆದನು. ತನ್ನ ಮುಂದೆಯೇ ಸಾಮೂಹಿಕ ಅತ್ಯಾಚಾರ ನಡೆಸುವಂತೆ ಸಂಬಂಧಿಕರಿಗೆ ಹೇಳಿ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.
ಅತ್ತೆ, ಪತಿ ಮತ್ತಿತರರು ನಿರಂತರವಾಗಿ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಅವರಿಗೆ ಹಣ ಸಿಗದಿದ್ದಾಗ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವಂತೆ ಸಂಬಂಧೀಕರನ್ನು ಪ್ರೇರೇಪಿಸಿದರು. ಆರೋಪಿಗಳ ಪೈಕಿ ಓರ್ವ ನನ್ನನ್ನು ಕಮಾನ್‌ಗೆ ಕರೆ ತಂದು ಅಲ್ಲಿ ಅತ್ಯಾಚಾರವೆಸಗಿದ್ದಾನೆ. ಸಾಮೂಹಿಕ ಅತ್ಯಾಚಾರದ ವೀಡಿಯೋ ಚಿತ್ರೀಕರಿಸಿ ಯೂ ಟ್ಯೂಬ್‌ಗೆ ಹಾಕಿದ್ದಾರೆ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಅಂದಿನಿಂದಲೇ ಕಿರುಕುಳ ನಡೆಯುತ್ತಿತ್ತು. ಈ ನಡುವೆ ಪತಿ ಮನೆಯವರ ಕಿರುಕುಳ ತಾಳಲಾರದೆ ಆಕೆ ಪೋಷಕರ ಮನೆಗೆ ತೆರಳಿದ್ದರು. ಆದರೆ ಪತಿ ಮನಸ್ಸು ಬದಲಾಯಿಸಿ ಆಕೆಯನ್ನು ಕರೆ ತಂದಿದ್ದ. ಬಳಿಕ ಯಥಾ ಪ್ರಕಾರ ಕಿರುಕುಳ ನೀಡುವುದನ್ನು ಮುಂದುವರಿಸಿದ್ದು, ಇದೀಗ ಸಾಮೂಹಿಕ ಅತ್ಯಾಚಾರದಂಥ ಹೀನ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ