ಮೇ 7ರಂದು ರಾಜ್ಯದಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ಲೋಕಾರ್ಪಣೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಅಂಬುಲೆನ್ಸ್ : ಸಚಿವ ಪ್ರಭು ಚವ್ಹಾಣ

ಬೆಂಗಳೂರು: ಪಶುಸಂಗೋಪನ ಇಲಾಖೆಯಿಂದ ಸಂಚಾರಿ ಪಶು ಚಿಕಿತ್ಸಾಲಯದ ಲೋಕಾರ್ಪಣೆ ಮೇ 7 ರಂದು ನಡೆಯಲಿದೆ ಎಂದು ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ವಿಕಾಸ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7 ರಂದು ಕೇಂದ್ರ ಸರ್ಕಾರದಿಂದ ಕೊಡಲ್ಪಟ್ಟ 275 ಪಶು ಸಂಜೀವಿನಿ ಅಂಬುಲೆನ್ಸ್ ಲೋಕಾರ್ಪಣೆ ನಡೆಯಲಿದೆ. ಅಲ್ಲದೆ, 1962 ಹೆಲ್ಪ್ ಲೈನ್ ಜಾರಿಯಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಒಮದು ಅಂಬುಲೆನ್ಸ್ ನೀಡಲಾಗುತ್ತದೆ ಎಂದು ಹೇಳಿದರು.

ಮೇ 7 ರಂದು ಮಧ್ಯಾಹ್ನ 12ಕ್ಕೆ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದ ಮುಂಭಾಗದಲ್ಲಿ ಪಶು ಸಂಜೀವಿನಿ ಅಂಬುಲೆನ್ಸ್ ಲೋಕಾರ್ಪಣೆ ಮಾಡಲಿದ್ದಾರೆ. ಒಂದು ಲಕ್ಷ ಜಾನುವಾರಗಳಿಗೆ ಒಂದು ವಾಹನ ಇರುತ್ತದೆ. ಒಬ್ಬ ಪಶು ವೈದ್ಯರು, ಸಹಾಯಕ, ಚಾಲಕರು ವಾಹನಗಳಲ್ಲಿ ಇರುತ್ತಾರೆ. ರೈತರು ಕರೆ ಮಾಡಿದ ಕಡೆ ವಾಹನ ಹೋಗುತ್ತದೆ. ಕೇಂದ್ರದ 60% ರಷ್ಟು, ರಾಜ್ಯದ 40%ರಷ್ಟು ಅನುದಾನದಲ್ಲಿ ನಿರ್ವಾಹಣೆ ನಡೆಯಲಿದೆ. ಇದು ಒಟ್ಟು 44 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ನನ್ನ ಇಲಾಖೆಯಲ್ಲಿ ನೇಮಕಾತಿ ಪಾರದರ್ಶಕವಾಗಿ ಆಗಿದೆ. ಯಾವುದೇ ಒಂದು ಆರೋಪ ನನ್ನ ಮೇಲೆ ಇಲ್ಲ. ನನ್ನ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಆರೋಪ ಬಂದಿಲ್ಲ. ನನ್ನ ಕೆಲಸವನ್ನು ಬೊಮ್ಮಾಯಿ ಅವರು ಹೊಗಳಿದ್ದಾರೆ. ವರಿಷ್ಠರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement