ಕರ್ನಾಟಕದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ನಕ್ಷೆ ಪೋಸ್ಟ್: ಎಂಇಎಸ್ ಮುಖಂಡನ ವಿರುದ್ಧ ಎಫ್‌ಐಆರ್

ಬೆಳಗಾವಿ: ಕರ್ನಾಟಕದ ಐದು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ ಗ್ರಾಫಿಕ್ ವೀಡಿಯೋ ಮತ್ತು ಫೋಟೋಗಳನ್ನು ತನ್ನ ಫೇಸ್ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯಲ್ಲಿ ಈ ಗ್ರಾಫಿಕ್ಸ್ ಇದೆ. ಇದನ್ನು ಶುಭಂ ಶೆಳಕೆ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಪೋಸ್ಟ್‌ನಲ್ಲಿ ಸಂಪೂರ್ಣ ಸಂಯುಕ್ತ ಮಹಾರಾಷ್ಟ್ರ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ಪೋಸ್ಟ್ ವಿರುದ್ಧ ಕರವೇ ಕಾರ್ಯಕರ್ತ ವಿನಾಯಕ ಬೋವಿ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಶುಭಂನನ್ನು ಠಾಣೆಗೆ ಕರೆಸಿ ಪೋಸ್ಟ್ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಆದರೆ, ಈವರೆಗೆ ಶುಭಂ ಪೋಸ್ಟ್ ಡಿಲೀಟ್ ಮಾಡದೇ ಉದ್ದಟತನ ತೋರಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ಶೆಳಕೆ ವಿರುದ್ಧ ಐಟಿ ಆಕ್ಟ್ 2000(U/s-66), ಐಪಿಸಿ ಸೆಕ್ಷನ್ 1860(U/s-153B) ಅಡಿಯಲ್ಲಿ ಶುಭಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement