ವಿದ್ಯುತ್ ಅವಘಡ: ತಾಯಿ-ಇಬ್ಬರು ಮಕ್ಕಳು ಸಾವು

ಕೊಪ್ಪಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಾಯಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಸಂಭವಿಸಿದೆ.
ಮೃತರನ್ನು 28 ವರ್ಷದ ಶೈಲಾ, ಮಕ್ಕಳಾದ ಪವನ್ (2) ಮತ್ತು ಸಾನ್ವಿ (3) ಎಂದು ಗುರುತಿಸಲಾಗಿದೆ. ವಿದ್ಯುತ್ ವೈರ್‌ ಸ್ಪರ್ಷಿಸಿದ ಕಾರಣ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ತಾಯಿ ಶೈಲಾ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬಟ್ಟೆ ಹೋಗಿದ್ದಾಗ 2 ವರ್ಷದ ಮಗ ಪವನ್ ಮನೆಯಲ್ಲಿದ್ದ ವಿದ್ಯುತ್ ವೈರ್ ಹಿಡಿದುಕೊಂಡಿದ್ದಾನೆ. ವಿದ್ಯುತ್‌ ಪ್ರವಹಿಸಿ ಪವನ್ ಒದ್ದಾಡುವುದನ್ನು ನೋಡಿದ ಮೂರು ವರ್ಷದ ಅಕ್ಕ ಸಾನ್ವಿ ಬಿಡಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳನ್ನು ನೋಡಿದ ತಾಯಿ ಸಹ ಮಕ್ಕಳನ್ನ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ತಂದೆ ಉಮೇಶ್ ವ್ಯಾಪಾರ ಮಾಡಲು ಸಂತೆಗೆ ಹೋಗಿದ್ದ ಎಂದು ಹೇಳಲಾಗಿದೆ. ಹೆಂಡತಿ-ಮಕ್ಕಳನ್ನು ಕಳೆದುಕೊಂಡ ಉಮೇಶ್ ರೋದಿಸುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement