ಅಪರೂಪದ ಮದುವೆ: ತಂದೆಯ ಮೇಣದ ಪ್ರತಿಮೆ ಮುಂದೆ ಮಗನ ವಿವಾಹ…!

ಮೈಸೂರು: ಯುವಕನೊಬ್ಬ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾಗಲಿದ್ದಾನೆ. ವಿವಾಹ ಶಾಸ್ತ್ರಗಳು ಆರಂಭವಾಗಿದ್ದು, ಇಂದು ಭಾನುವಾರ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿವಾಹ ನಡೆಯಲಿದೆ.
ಮೈಸೂರು ಜಿಲ್ಲೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಈ ಅಪರೂಪದ ವಿವಾಹ ನಡೆಯುತ್ತಿದ್ದು, ಡಾ.ಯತೀಶ ಹಾಗೂ ಡಾ. ಅಪೂರ್ವ ಅವರು ಡಾ.ಯತೋಶ ಅವರ ತಂದೆಯ ಮೇಣದ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

ಡಾ.ಯತೀಶ ಅವರ ತಂದೆ ರಮೇಶ ಒಂದು ವರ್ಷದ ಹಿಂದೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದರು. ತಂದೆಯ ನೆನಪಿನಲ್ಲಿ ಪುತ್ರ ಮೇಣದ ಪ್ರತಿಮೆ ಮಾಡಿಸಿದ್ದು, ತಂದೆಯ ನೆನಪಿನಲ್ಲಿ ಈ ಮೇಣದ ಪ್ರತಿಮೆ ಸಮ್ಮುಖದಲ್ಲಿಯೇ ವಿವಾಹವಾಗುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಜ್ಜಂಪುರ ನಿವಾಸಿಯಾಗಿದ್ದ ರಮೇಶ ಅವರ ಪುತ್ರ ಯತೀಶ ಅವರು ಮೈಸೂರು ಜೆ. ಎಸ್. ಎಸ್ ಆಯುರ್ವೇದ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.
ಅವರ ವಿವಾಹ ನಂಜನಗೂಡು ತಾಲೂಕಿನ ಮಲ್ಕುಂಡಿಯ ನಿವಾಸಿ ಡಾ. ಅಪೂರ್ವ ಜೊತೆ ಭಾನುವಾರ ನಡೆಯಲಿದೆ. ಶನಿವಾರ ವಿವಾಹ ಶಾಸ್ತ್ರಗಳನ್ನು ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಮುಗಿಸಿದ್ದಾರೆ.

ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement