ಬೆಂಗಳೂರಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ‌ ಪಡೆಯಲು 15 ದಿನಗಳ ಗಡುವು

ಬೆಂಗಳೂರು : ರಾಜ್ಯದಲ್ಲಿ ಆಜಾನ್-ಸುಪ್ರಭಾತ ವಿವಾದ ಹಿನ್ನೆಲೆಯಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಸರ್ಕಾರವು ಮಾರ್ಗಸೂಚಿ ಹೊರಡಿಸಿದೆ. ಈ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಧ್ವನಿವರ್ಧಕ ಬಳಸಬೇಕಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ ವೇಳೆ ಲೌಡ್ ಸ್ಪೀಕರ್​ ಬಳಕೆಗೆ ಅನುಮತಿಯಿಲ್ಲ. ನಿತ್ಯ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕಡ್ಡಾಯವಾಗಿದೆ. ಸರ್ಕಾರ ಈ ಹಿಂದೆಯೇ ಲೌಡ್ ಸ್ಪೀಕರ್ ಗೈಡ್​​ಲೈನ್ಸ್​ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಗೊಂದಲವಿಲ್ಲ. ಎಲ್ಲರೂ ಆದೇಶ ಪಾಲನೆ ಮಾಡುತ್ತಿದ್ದಾರೆ ಎಂದರು

ಈ ಕುರಿತು 2002ರಲ್ಲೇ ಆದೇಶವಾಗಿದೆ. ರಾತ್ರಿ 10ರಿಂದ ಮುಂಜಾನೆ 6 ಗಂಟೆಯ ತನಕ ಯಾವುದೇ ಲೌಡ್ ಸ್ಪೀಕರ್ ಬಳಸಲು ಅವಕಾಶ ಇಲ್ಲ. ವಿಶೇಷ ಸಮಯದಲ್ಲಿ ಮಾತ್ರ ಅವಕಾಶವಿದೆ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಡಿಸೆಬಲ್ ಲಿಮಿಟ್ಸ್ ಅನುಮೋದಿಸಿ ಸರ್ಕಾರ ಆದೇಶ ಹೊರಡಿಸಿದೆ‌ ಎಂದು ಹೇಳಿದರು.
ಸದ್ಯ ಈಗಿರುವ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯವಾಗಿದೆ. ಅನುಮತಿ ಪಡೆಯಲು ಎಲ್ಲಾ ಮಸೀದಿ, ಮಂದಿರಗಳಿಗೂ 15 ದಿನಗಳ ಗಡುವು ನೀಡಲಾಗಿದೆ. 15 ದಿನದ ಒಳಗಡೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅನುಮತಿ ಪಡೆಯದೇ ಇದ್ದರೆ ಕ್ರಮಕೈಗೊಳ್ಳಲಾಗುವುದು ಎಂದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement