ಕುಮಟಾ: ತಡರಾತ್ರಿ ಕಾರಿನಲ್ಲಿ ಬಂದು ರಥಬೀದಿಯಲ್ಲಿದ್ದ ದನ ಕದ್ದೊಯ್ದ ಗೋ ಕಳ್ಳರು-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕುಮಟಾ: ತಡರಾತ್ರಿ ಕಾರಿನಲ್ಲಿ ಬಂದವರು ರಸ್ತೆಯಲ್ಲಿ ಮಲಗಿದ್ದ ಗೋವುನ್ನು ತುಂಬಿಕೊಂಡು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿರುವುದ ಬೆಳಕಿಗೆ ಬಂದಿದೆ.ಈ ಘಟನೆಯ ವೀಡಿಯೊ ವೈರಲ್‌ ಆಗಿದ್ದು, ರಾತ್ರಿ 1 ಗಂಟೆ ವೇಳೆಗೆ ಕುಮಟಾ ಪಟ್ಟಣದ ರಥಬೀದಿಯ ಶ್ರೀ ಆಂಜನೇಯ ದೇವಸ್ಥಾನದ ಬಳಿ ಸಂಚರಿಸಿದ ಸ್ವಿಫ್ಟ್ ಡಿಸೈರ್ ಕಾರು ರಸ್ತೆಯಲ್ಲಿ ಗೋವುಗಳು ಮಲಗಿದ್ದಲ್ಲಿ ನಿಂತಿದೆ. ಅದರಿಂದ ಇಳಿದ ಮೂವರು ಗೋಕಳ್ಳರು ಕರುವೊಂದನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದು ಸಿಸಿ ಕ್ಯಾಮೆರಾ ಸೆರೆಯಾಗಿವೆ. ಮಲಗಿದ್ದ ಕೆಲದನಗಳು ಕಾರು ನಿಂತಿದ್ದು ಕಂಡು ದೂರ ಹೋಗಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಕಾರು ಬಂದ ನಿಂತಾಕ್ಷಣ ಮಲಗಿದ್ದ ಕೆಲ ದೊಡ್ಡ ಹಸುಗಳು ಅಲ್ಲಿಂದ ದೂರ ಹೋಗಿವೆ. ಆದರೆ ಅವರು ಮಲಗಿದ್ದ ಕರುವನ್ನು ಎತ್ತಿ ಕಾರಿನಲ್ಲಿ ತುಂಬಿದ್ದಾರೆ. ಈ ಘಟನೆ ಕೆಲದಿನಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದ್ದು, ಈಗ ಘಟನೆಯ ವೀಡಿಯೊ ವೈರಲ್‌ ಆಗಿದೆ. ಈ ಕೃತ್ಯ ಕುಮಟಾದ ರಥ ಬೀದಿಯ ವೆಂಕಟರಮಣ ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ.
ನಗರದಲ್ಲಿ ರಸ್ತೆ ಬದಿಯಲ್ಲಿರುವ ದನಗಳು ರಾತ್ರೆ ಬೆಳಗಾಗುವದರ ಒಳಗೆ ಮಾಯವಾಗುತ್ತಿರುವ ಪ್ರಕರಣ ಕಳೆದ ಒಂದು ವರ್ಷದಿಂದೀಚೆಗೆ ಹೆಚ್ಚಾಗಿತ್ತು.

ದನಗಳನ್ನು ಯಾರು ಕದ್ದೊಯ್ಯುತ್ತಾರೆ ಎನ್ನುವ ಮಾಹಿತಿಯೇ ಇಲ್ಲವಾಗಿತ್ತು. ಆದರೆ ಕಳೆದ ಕೆಲವು ದಿನಗಳ ಹಿಂದೆ ಕುಮಟಾ ನಗರದ ರಥ ಬೀದಿಯಲ್ಲಿ ರಸ್ತೆಯಲ್ಲಿ ಮಲಗಿರುವ ಗೋವನ್ನು ಕದ್ದು ಸಾಗಿಸುತ್ತಿರುವ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ.
ತಕ್ಷಣ ಕಾರ್ಯಪ್ರವರ್ತಕರಾದ ಪೊಲೀಸರು ಆರೊಪಿಗಳಿಗಾಗಿ ಬಲೆ ಬೀಸಿದ್ದಾರೆ.ಶನಿವಾರ ಮಧ್ಯಾಹ್ನ ರಥ ಬೀದಿಯಲ್ಲಿ ಇರುವ ವೆಂಕಟ್ರಮ ದೇವಾಲಯದಲ್ಲಿ ಇರುವ ಸಿ.ಸಿ.ಟಿ.ವಿಯನ್ನು ಪರಿಶೀಲನೆಗಾಗಿ ಪಿ.ಎಸ್.ಐ ನವೀನ ನಾಯ್ಕ ಆಗಮಿಸಿದ್ದರು.ಇಷ್ಟೆ ಅಲ್ಲದೆ ರಥ ಬೀದಿಯಾದ್ಯಂತ ಇರುವ ಖಾಸಗಿ ಮತ್ತು ಪುರಸಭಾ ವ್ಯಾಪ್ತಿಯಲ್ಲಿರುವ ಸಿ.ಸಿ.ಟಿ.ವಿಯ ಪರಿಶೀಲನೆಯನ್ನು ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಈ ಹಿಂದೆ ಕುಮಟಾದ ಸೂತ್ತಲಿನ ಹಳ್ಳಿಯಲ್ಲಿರುವ ದನಗಳು ಗೋಗಳ್ಳರ ಪಾಲಾಗುತ್ತಿರುವುದು ಸಹಜ ಎನ್ನುವಂತಾಗಿತ್ತು.ಹಳ್ಳಿಯ ಕೊಟ್ಟಿಗೆಯಲ್ಲಿರುವ ದನಗಳನ್ನು ಕದ್ದೊಯ್ದ ಅದೇಷ್ಟೋ ಘಟನೆಗಳು ನಡೆದಿದ್ದರು ಕಳ್ಳರ ಪತ್ತೆ ಕಷ್ಟ ಸಾಧ್ಯವಾಗಿತ್ತು.ಆದರೆ ನಗರದಲ್ಲಿ ರಾತ್ರೆ ಅವಧಿಯಲ್ಲಿ ದನಕಳ್ಳತನ ಆರಂಭವಾಗಿದೆ
ಹಳ್ಳಿಯಲ್ಲಿರುವ ಮೇಯ್ಯಲು ಬಿಟ್ಟ ಅದೆಷ್ಟೋ ದನಗಳಿಗೆ ಮತ್ತು ಭರಿಸುವ ಔಷಧ ಕೊಟ್ಟು ಕಳ್ಳತನ ಮಾಡುತ್ತಿದ್ದರು ಎಂದು ಅನೇಕ ರೈತರು ಹೇಳುತ್ತಿದ್ದಾರೆ.
ದನಗಳ್ಳರು ಯಾರೇ ಆಗಿದ್ದರೂ ಅವರನ್ನು ಬಂಧಿಸುವುದು ಖಚಿತ ಎಂದು ಕುಮಟಾ ಪಿ.ಎಸ್.ಐ ನವೀನ ನಾಯ್ಕ ಹೇಳಿದ್ದಾರೆ. ಈಗಾಗಲೆ ದನಗಳ್ಳರು ಬಳಸಿದ್ದ ವಾಹನ ನಂಬರ್‌ಗಳ ಟ್ರೇಸ್ ನಡೆದಿದೆ.ಇದಷ್ಟೇ ಅಲ್ಲದೆ ಈ ಹಿಂದೆ ನಗರದಲ್ಲಿ ನಡೆದ ದನಕಳ್ಳರನ್ನು ಹಿಡಿಯುವದಕ್ಕಾಗಿ ಬೇರೆ-ಬೇರೆ ಸಿಸಿಟಿವಿಯನ್ನು ಪೊಲೀಸರು ಪರೀಶಿಲನೆ ನಡೆಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement