ಮದುವೆಗೆ ಸಮಯಕ್ಕೆ ಬಾರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್​ ಮಾಡಿದ ವರ; ಬೇರೆಯವನ ಮದುವೆಯಾದ ವಧು..!

ಜೈಪುರ: ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಮದುಮಗ ತಡವಾಗಿ ಮಂಟಪಕ್ಕೆ ಬಂದಿದ್ದಕ್ಕೆ ವಧು ಬೇರೊಬ್ಬನನ್ನು ಮದುವೆಯಾದ ಘಟನೆ ನಡೆದಿತ್ತು.
ಈಗ ಅಂತಹದ್ದೇ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಚುರು ಜಿಲ್ಲೆಯ ವಧು ತನ್ನ ವರನ ಕುಡಿತದ ನೃತ್ಯದಿಂದ ಬಾರಾತ್​ಗೆ (ಮದುವೆ ಮೆರವಣಿಗೆ) ತಡವಾಗಿ ಬಂದಿದ್ದರಿಂದ ಕುಡಿತದ ಚಟಕ್ಕೆ ಕೋಪಗೊಂಡು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ರಾಜ್‌ಗಢ ತಹಸಿಲ್‌ನ ಚೇಲಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೇ 15ರ ಭಾನುವಾರ ವರ ಸುನೀಲ್ ಮತ್ತು ಆತನ ಸಂಬಂಧಿಕರು ವಧುವಿನ ಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿ 9 ಗಂಟೆಗೆ ವಧುವಿನ ಮನೆಗೆ ಮದುವೆ ಮೆರವಣಿಗೆ ಹೊರಟಿತು. ಆದರೆ ವರ ಮತ್ತು ಅವನ ಸ್ನೇಹಿತರು ಕುಡಿದು ಡಿಜೆ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುವುದನ್ನು ಮುಂದುವರೆಸಿದರು. ಇದರಿಂದಾಗಿ ಮೆರವಣಿಗೆ ಮದುವೆ ಸ್ಥಳಕ್ಕೆ ತೆರಳಲು ಬಹಳ ತಡವಾಯಿತು. ಮುಹೂರ್ತ ಸಮೀಪಿಸಿದರೂ ಮದುವೆ ಮಂಟಪದ ಬಳಿ ಮದುಮಗನ ಸುಳಿವೇ ಇರಲಿಲ್ಲ.ಮುಹೂರ್ತ ಮುಗಿದು ಎಷ್ಟೊತ್ತಾದರೂ ಬರಲೇ ಇಲ್ಲ. ಕುಡಿದು ಕುಪ್ಪಳಿಸುತ್ತಿದ್ದ ವರನನ್ನು ನೋಡಿ ಅಸಮಾಧಾನಗೊಂಡ ವಧು ಕಾಯುತ್ತಿದ್ದರಿಂದ ನಿರಾಶೆಗೊಂಡ ವಧು ಮೆರವಣಿಗೆಯನ್ನು ಹಿಂದಿರುಗಿಸಲು ನಿರ್ಧರಿಸಿದಳು. ಆತನನ್ನು ಮದುವೆಯಾಗಲು ನಿರಾಕರಿಸಿದಳು.

ಪ್ರಮುಖ ಸುದ್ದಿ :-   ಆಮಿಷ...ಮದುವೆ.. ನಂತರ ಚಿನ್ನಾಭರಣ-ಹಣದೊಂದಿಗೆ ಪಲಾಯನ...: ಕೊನೆಗೂ ಬಲೆಗೆಬಿದ್ದ 25 ಪುರುಷರನ್ನು ವಂಚಿಸಿದ್ದ 'ಲೂಟಿಕೋರ ವಧು'...!

ಮದುಮಗಳು ವರನನ್ನು ಮದುವೆಯಾಗಲು ಒಪ್ಪದ ಹಿನ್ನೆಲೆಯಲ್ಲಿ ಆಕೆಯ ಮನೆಯವರು ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದರು. ಈ ಘಟನೆಯ ಒಂದು ದಿನದ ಬಳಿಕ ವರನ ಕುಟುಂಬ ವಧುವಿನ ಕುಟುಂಬದ ವಿರುದ್ಧ ದೂರು ನೀಡಲು ರಾಜ್‌ಗಢ ಪೊಲೀಸ್ ಠಾಣೆಗೆ ತೆರಳಿದೆ. ವಧುವಿನ ಕಡೆಯವರು ವರ ಮತ್ತು ಅವರ ಕುಟುಂಬದವರ ವರ್ತನೆ ಹಾಗೂ ಮದುವೆಯ ಮೆರವಣಿಗೆ ಬಗ್ಗೆ ಆರೋಪಿಸಿದ್ದಾರೆ. ಆದರೆ, ಇದು ಕೌಟುಂಬಿಕ ಸಮಸ್ಯೆಯಾದ್ದರಿಂದ ಅವರವರೇ ಬಗೆಹರಿಸಿಕೊಳ್ಳಬೇಕೆಂದು ಪೊಲೀಸರು ಸಲಹೆ ನೀಡಿದರು. ಏತನ್ಮಧ್ಯೆ, ಪೊಲೀಸರೊಂದಿಗೆ ಸಮಾಲೋಚಿಸಿದ ನಂತರ, ಎರಡೂ ಕಡೆಯವರು ಮದುವೆಯನ್ನು ರದ್ದುಗೊಳಿಸಲು ಕೌಟುಂಬಿಕ ಸಮಸ್ಯೆಗಳನ್ನು ಉಲ್ಲೇಖಿಸಲು ನಿರ್ಧರಿಸಿದರು ಮತ್ತು ಲಿಖಿತ ದೃಢೀಕರಣವನ್ನು ನೀಡಿದರು.

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement