ಹೆಲ್ಮೆಟ್ ಧರಿಸದಿದ್ದರೆ ISI ಮಾರ್ಕ್ ಇಲ್ಲದಿದ್ದರೆ ಬೀಳುತ್ತೆ 2,000 ರೂ. ದಂಡ…!

ನವದೆಹಲಿ: ಇನ್ನೂ ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ( Helmet ) ಇಲ್ಲದೆ ಸವಾರಿ ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ.
ಭಾರತ ಸರಕಾರ 1998 ರ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು, ಅದರ ಪ್ರಕಾರ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದರೆ 2,000 ರೂ.ವರೆಗಿನ ತ್ವರಿತ ದಂಡವನ್ನು ಭರಿಸಬೇಕಾಗುತ್ತದೆ. ಅಪಘಾತಗಳಲ್ಲಿ ಜನರ ಜೀವ ಹೋಗುವುದನ್ನು ತಡೆಗಟ್ಟಲು ಹೆಚ್ಚು ಪ್ರಧಾನ್ಯತೆ ನೀಡಲಾಗಿದೆ.

ಸವಾರ ಹೆಲ್ಮೆಟ್ ಧರಿಸಿದ್ದರೂ ಅದರ ಬಕಲ್ ಬಿಚ್ಚಿದ್ದರೆ 1,000 ರೂ ದಂಡ ಹಾಕುತ್ತಾರೆ ಅಲ್ಲದೆ, ಹೆಲ್ಮೆಟ್ ನಿಜವಾದ BSI (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಣವನ್ನು ಹೊಂದಿಲ್ಲದಿದ್ದರೆ 1,000 ರೂ ದಂಡ ವಿಧಿಸಬಹುದು. ಸಿಗ್ನಲ್ ಜಂಪ್ ಮಾಡುವಂತಹ ಇತರ ಸಂಚಾರ ಉಲ್ಲಂಘನೆಗಳಿಗೆ 2,000 ರೂ ದಂಡ ಕೊಡಬೇಕಾಗುತ್ತದೆ.
ಹಲವಾರು ದ್ವಿಚಕ್ರ ವಾಹನ ಸವಾರರು ತಮ್ಮ ತಲೆಯ ಮೇಲೆ ಹೆಲ್ಮೆಟ್ ಅನ್ನು ಸರಳವಾಗಿ ಇಡುವುದು ಕಂಡುಬರುತ್ತದೆ. ಸ್ಟ್ರಾಪ್ ಲಾಕ್ ಆಗಿರುವ ಹೆಲ್ಮೆಟ್ ಧರಿಸದಿದ್ದರೆ ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಹಾರಿಹೋಗಬಹುದು. ಗರಿಷ್ಟ ಸುರಕ್ಷತೆಯನ್ನು ಒದಗಿಸಲು ಹೆಲ್ಮೆಟ್ ತಲೆಯ ಸುತ್ತಲೂ ದೃಢವಾಗಿ ಉಳಿಯಬೇಕು.ಹೀಗಾಗಿ ಜನರನ್ನು ಎಚ್ಚರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement