ದೆಹಲಿ ವಿಮಾನ ನಿಲ್ದಾಣದಲ್ಲಿ ತ್ರಿವರ್ಣ ಧ್ವಜದ ಮೇಲೆ ನಿಂತು ನಮಾಜ್ ಮಾಡಿದ ವ್ಯಕ್ತಿಯ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ನವದೆಹಲಿ: ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಲು ರಾಷ್ಟ್ರಧ್ವಜವನ್ನು ಬಳಸಿದ ಅಸ್ಸಾಂನ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಈ ಘಟನೆಯು ಮೇ 8ರಂದು ನಡೆದಿದ್ದು, ಮೊಹಮ್ಮದ್ ತಾರಿಕ್ ಅಜೀಜ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಅದೇ ದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಅಸ್ಸಾಂನ ನಿವಾಸಿ ಎಂ.ಡಿ. ತಾರಿಕ್ ಅಜೀಜ್ ಅವರು ದುಬೈನಿಂದ 6E24 ಫ್ಲೈಟ್‌ನಲ್ಲಿ ಬಂದರು ಮತ್ತು ಇಂಡಿಗೋ ಫ್ಲೈಟ್ 6E 5398 ಮೂಲಕ ದಿಮಾಪುರ್‌ಗೆ ಹೋಗಬೇಕಾಗಿತ್ತು. ಅವರು ಭಾರತದ ರಾಷ್ಟ್ರಧ್ವಜವನ್ನು ನೆಲದ ಮೇಲೆ ಹರಡಿದರು ಮತ್ತು ಅದರ ಮೇಲೆ ನಿಂತರು. ಬೋರ್ಡಿಂಗ್ ಗೇಟ್ 1 ಮತ್ತು 3 ರ ನಡುವೆ ನಮಾಜ್ ಅವರು ರಾಷ್ಟ್ರಧ್ವಜದ ಮೇಲೆ ಕುಳಿತು ನಮಾಜ್‌ ಮಾಡುತ್ತಿದ್ದರು. ಅವರ ಚಟುವಟಿಕೆಗಳು ಅನುಮಾನಾಸ್ಪದ ಮತ್ತು ಅನಪೇಕ್ಷಿತವೆಂದು ಕಂಡುಬಂದಿದೆ. ಅವರು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ’ ಎಂದು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಹೇಳಿದೆ.

ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ನಿರ್ವಹಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಅಜೀಜ್‌ನನ್ನು ಮೊದಲು ಬಂಧಿಸಿ ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದರು.
ರಾಷ್ಟ್ರೀಯ ಗೌರವ ಅವಮಾನಗಳ ತಡೆ ಕಾಯಿದೆ, 1971 ರ ಅಡಿಯಲ್ಲಿ ದೆಹಲಿ ಪೊಲೀಸರು ನಂತರ ಪ್ರಕರಣವನ್ನು ದಾಖಲಿಸಿದರು. ಇದು ಜಾಮೀನು ನೀಡಬಹುದಾದ ಅಪರಾಧವಾಗಿದೆ.

ಪ್ರಮುಖ ಸುದ್ದಿ :-   ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ

ದೆಹಲಿ ಪೊಲೀಸರು ಅಜೀಜ್‌ನ ಪಾಸ್‌ಪೋರ್ಟ್, ಬೋರ್ಡಿಂಗ್ ಪಾಸ್‌ನ ಫೋಟೋಕಾಪಿ ಮತ್ತು ತ್ರಿವರ್ಣ ಧ್ವಜವನ್ನು ವಶಪಡಿಸಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ, ವಿಮಾನ ನಿಲ್ದಾಣದ ಸಿಬ್ಬಂದಿಯ ತನಿಖೆಯ ಸಮಯದಲ್ಲಿ ಅಜೀಜ್ ಅವರ ಕೃತ್ಯದ ಬಗ್ಗೆ ಪ್ರಶ್ನಿಸಿದಾಗ ತೃಪ್ತಿದಾಯಕ ಉತ್ತರವನ್ನು ಆತನಿಂದ ನೀಡಲು ಸಾಧ್ಯವಾಗಲಿಲ್ಲ.
ಡಿಸಿಪಿ ಪ್ರಕಾರ, ಸಿಆರ್‌ಪಿಸಿ ಸೆಕ್ಷನ್ 41 ರ ಅಡಿಯಲ್ಲಿ ನೋಟಿಸ್ ನೀಡಿದ ನಂತರ ಅಜೀಜ್ ಅವರನ್ನು ಬಿಡುಗಡೆ ಮಾಡಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement