ದೆಹಲಿ: ಶಾಸ್ತ್ರಿ ಭವನದ 7ನೇ ಮಹಡಿಯಿಂದ ಜಿಗಿದು ಐಟಿ ಸಚಿವಾಲಯದ ವಿಜ್ಞಾನಿ ಸಾವು

ನವದೆಹಲಿ: ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ 55 ವರ್ಷದ ವಿಜ್ಞಾನಿಯೊಬ್ಬರು ಸೋಮವಾರ ಕೇಂದ್ರ ದೆಹಲಿಯ ಶಾಸ್ತ್ರಿ ಭವನದ ಏಳನೇ ಮಹಡಿಯಿಂದಜಿಗಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯನ್ನು ಪಶ್ಚಿಮ ದೆಹಲಿಯ ಪೀರಗರ್ಹಿ ನಿವಾಸಿ ರಾಜೇಶ್ ಮಲ್ಲಿಕ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ, ಕೇಂದ್ರ ಸರ್ಕಾರದ ಹಲವಾರು ಸಚಿವಾಲಯಗಳನ್ನು ಹೊಂದಿರುವ ಶಾಸ್ತ್ರಿ ಭವನದ ಗೇಟ್ ಸಂಖ್ಯೆ ಎರಡು ಮುಂಭಾಗದಲ್ಲಿ ಕಾಕೇಶ ಮಲಿಕ್‌ ಅವರ ಶವ ಪತ್ತೆಯಾಗಿದೆ.

ಉಪ ಪೊಲೀಸ್ ಆಯುಕ್ತ (ನವದೆಹಲಿ) ಅಮೃತಾ ಗುಗುಲೋತ್, “ಶಾಸ್ತ್ರಿ ಭವನದಿಂದ ಜಿಗಿದ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿದಾಗ, ವ್ಯಕ್ತಿಯನ್ನು ರಾಕೇಶ್ ಮಲ್ಲಿಕ್ ಎಂದು ಗುರುತಿಸಲಾಗಿದೆ. “ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡ ಮತ್ತು ಆಂಬ್ಯುಲೆನ್ಸ್‌ನೊಂದಿಗೆ ಅಪರಾಧ ತಂಡವು ಸ್ಥಳಕ್ಕೆ ತಲುಪಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement