ಕುಂದಾಪುರದ ಯುವತಿ ವಿಷ ಸೇವಿಸಿ ಆತ್ಮಹತ್ಯೆ: ಇದಕ್ಕೆ ನಂಬಿಕೆ ದ್ರೋಹ, ಲವ್ ಜಿಹಾದ್ ಕಾರಣವೇ..?

ಉಡುಪಿ: ಕುಂದಾಪುರ ತಾಲೂಕು ತಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಪ್ಪಿನ ಕುದ್ರು ಯುವತಿ, 25 ವರ್ಷ ವಯಸ್ಸಿನ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಕೋಟೇಶ್ವರದ ನಿವಾಸಿ ಅಜೀಜ್‌ (32), ಆತನ ಪತ್ನಿ ಸಲ್ಮಾ ಅಜೀಜ್‌ ಎನ್ನುವರು  ಕಾರಣ ಎಂದು ಶಿಲ್ಪಾ ಸಹೋದರ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಘಟನೆ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಬುಧವಾರ ಹಿಂದೂ ಪರ ಸಂಘಟನೆ ಕಾರ‍್ಯಕರ್ತರು ಹಾಗೂ ಬಿಜೆಪಿ ಮುಖಂಡರು ಕುಂದಾಪುರ ಠಾಣೆಗೆ ಆಗಮಿಸಿ ಮನವಿ ಸಲ್ಲಿಸಿದರು.

ಈಕೆ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಗ್ರಾಮದ ಯುವತಿಯಾಗಿದ್ದು, ತಲ್ಲೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಟ್ಯುಟೋರಿಯಲ್ ನಲ್ಲಿ ಓದುತ್ತಿರುವಾಗಲೇ ಆರೋಪಿ ಅಜೀಜ್‌ ಪರಿಚಯವಾಗಿದ್ದು ನಂತರ ಪ್ರೇಮಾಂಕುರವಾಗಿತ್ತು. ಆತ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ವಿಚಾರ ಆತನ ಪತ್ನಿಗೆ ತಿಳಿದಿದ್ದು ಆಕೆಯ ಪ್ರೇರೇಪಣೆಯೂ ಇತ್ತು. ಏತನ್ಮದ್ಯೆ ಇಬ್ಬರ ನಡುವೆ ಜಗಳವಾಗಿ ಆರೋಪಿ ಅಜೀಜ್‌  ಆಕೆ ಕೆಲಸ ಮಾಡುತ್ತಿದ್ದ ಬಟ್ಟೆಯಂಗಡಿಗೆ ಬಂದು ಇತ್ತೀಚಿಗೆ ನಿಂದಿಸಿದ್ದ. ಮದುವೆಯಾಗುವ ಭರವಸೆ ನೀಡಿ ಕೊನೆಗೆ ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ್ದಲ್ಲದೆ ಆರೋಪಿಗಳಾದ ಗಂಡ-ಹೆಂಡತಿ ಶಿಲ್ಪಾಳಿಗೆ ಬೈದು ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ. ಇದರಿಂದ ನೊಂದ ಆಕೆ ಮೇ 23 ರಾತ್ರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ನಂತರ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾತನಾಡುವ ಸ್ಥಿತಿಯಲ್ಲಿದ್ದಾಗ ಆರೋಪಿಗಳಾದ ಅಜೀಝ್ ಹಾಗೂ ಸಲ್ಮಾ ಮಾನಸಿಕ ಹಿಂಸೆ ನೀಡಿ, ಮರ್ಯಾದೆ ತೆಗೆದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಳು..

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಆಕೆಯ ಸಾವಿಗೆ ಆರೋಪಿ ಅಜೀಜ್‌  ಮತ್ತು ಆತನ ಪತ್ನಿಯೇ ಕಾರಣ. ಅವರ ನಿಂದನೆಯ ಮಾತುಗಳು ಹಾಗೂ ಆತ್ಮಹತ್ಯೆಗೆ ನೀಡಿದ ಪ್ರಚೋದನೆಯೇ ಶಿಲ್ಪಾ ಸಾವಿಗೆ ಕಾರಣ. ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮೃತ ಯುವತಿಯ ಸಹೋದರ ಠಾಣಾಧಿಕಾರಿಗೆ ದೂರು ಸಲ್ಲಿಸಿದರು.
ಈಗ ಕುಟುಂಬ ಸಮೇತ ಅಜೀಜ್​ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದ್ದು, ಹಿಂದು ಸಂಘಟನೆ ಮುಖಂಡರು ಆತನನ್ನು ಕೂಡಲೇ ಬಂಧಿಸಿ ಜೈಲಿಗಟ್ಟಿ ಯುವತಿಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement