ದೆಹಲಿ ಗಲಭೆ ಆರೋಪಿ, ಪೊಲೀಸರತ್ತ ಗನ್ ತೋರಿಸಿದವನಿಗೆ ಹೀರೊ ರೀತಿ ಸ್ವಾಗತ….! ವೀಕ್ಷಿಸಿ

ನವದೆಹಲಿ: ಫೆಬ್ರವರಿ 2020ರ ಹಿಂಸಾಚಾರದ ವೇಳೆ ಪೊಲೀಸರತ್ತ ಬಂದೂಕು ತೋರಿಸಿ ಜೈಲು ಪಾಲಾದ ದೆಹಲಿ ಗಲಭೆ ಆರೋಪಿಯನ್ನು ನಾಲ್ಕು ಗಂಟೆಗಳ ಪೆರೋಲ್ ನೀಡಿದ ನಂತರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆಹೊರೆಯವರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಅಸ್ವಸ್ಥರಾಗಿರುವ ತನ್ನ ತಂದೆಯನ್ನು ಭೇಟಿ ಮಾಡಲು ನಾಲ್ಕು ಗಂಟೆಗಳ ಪೆರೋಲ್ ಮಂಜೂರು ಮಾಡಿದ ನಂತರ ಶಾರುಖ್ ಪಠಾಣ್ ಸೋಮವಾರ ಮನೆಗೆ ಬಂದಿದ್ದರು.
ವ್ಯಾಪಕವಾಗಿ ಪ್ರಸಾರವಾದ ವೀಡಿಯೊವು ಪಠಾಣ್ ಈಶಾನ್ಯ ದೆಹಲಿಯ ತನ್ನ ನೆರೆಹೊರೆಯಲ್ಲಿ ಪೊಲೀಸರ ಬೆಂಗಾವಲಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಜನಸಮೂಹವು ಹಿಂಬಾಲಿಸುವುದನ್ನು ತೋರಿಸುತ್ತದೆ. ಜನರು ಅವನನ್ನು ಹುರಿದುಂಬಿಸುವುದನ್ನು ಕಾಣಬಹುದು ಮತ್ತು ಅನೇಕರು ಹಸ್ತಲಾಘವ ಮಾಡಲು ಪ್ರಯತ್ನಿಸುತ್ತಾರೆ. ಗಂಟೆಗಳ ನಂತರ ಆತ ಮತ್ತೆ ಜೈಲಿಗೆ ಹೋಗಿದ್ದಾನೆ.

ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧದ ದೆಹಲಿ ಗಲಭೆಯ ಸಂದರ್ಭದಲ್ಲಿ ಪಠಾಣ್ ಪೊಲೀಸ್ ಸಿಬ್ಬಂದಿಯತ್ತ ಗನ್ ತೋರಿಸುತ್ತಿರುವುದು ವೈರಲ್ ವೀಡಿಯೊಗಳಲ್ಲಿ ಕಂಡುಬಂದಿದೆ. ಅವರನ್ನು ಬಂಧಿಸಿ ನ್ಯಾಯಾಲಯ ಶಿಕ್ಷೆಗೊಳಪಡಿಸಿತು.
ಆತನ ವಿರುದ್ಧದ ಆರೋಪಗಳಲ್ಲಿ ಗಲಭೆ, ಧಾರ್ಮಿಕ ದ್ವೇಷವನ್ನು ಉತ್ತೇಜಿಸುವುದು ಮತ್ತು ಕೊಲೆ ಯತ್ನ ಸೇರಿವೆ.

ಆತನ ವಕೀಲರು ಮಾರ್ಚ್‌ನಲ್ಲಿ, ಅವರ ತಂದೆ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದಾಗ ಆತನಿಗೆ ಒಂದು ದಿನದ ಪೆರೋಲ್ ನೀಡಬೇಕು ಎಂದು ವಾದಿಸಿದರು. ಆ ಸಮಯದಲ್ಲಿ ಶಸ್ತ್ರಚಿಕಿತ್ಸೆಯಲ್ಲಿದ್ದ ಕಾರಣ ಆತನಿಗೆ ತಂದೆಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮೂರು ದಿನಗಳ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನರು ಸಾವಿಗೀಡಾದರು ಮತ್ತು 200 ಮಂದಿ ಗಾಯಗೊಂಡರು

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement