ಕಾರುಗಳಿಗೆ ಮಾರಾಟ ಮಾಡಲು, ಸರ್ವಿಸ್‌ ನೀಡಲು ಮೊದಲು ಅನುಮತಿ ನೀಡದ ಹೊರತು ಟೆಸ್ಲಾ ಕಾರನ್ನು ಭಾರತದಲ್ಲಿ ಉತ್ಪಾದಿಸುವುದಿಲ್ಲ: ಎಲೋನ್ ಮಸ್ಕ್

ನವದೆಹಲಿ: ಭಾರತದಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡಲು ಆಮದು ಸುಂಕವನ್ನು ಕಡಿತಗೊಳಿಸಲು ಬಯಸುತ್ತಿರುವ ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾವು ಮೊದಲು ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಮತ್ತು ಸರ್ವಿಸ್‌ ನೀಡಲು ಅನುಮತಿಸದ ಹೊರತು ತನ್ನ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸುವುದಿಲ್ಲ ಎಂದು ಕಂಪನಿ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್ ಹೇಳಿದ್ದಾರೆ.
ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕುರಿತು ಟ್ವೀಟ್‌ನಲ್ಲಿ ಎಲೋನ್‌ ಮಸ್ಕ್‌, “ಟೆಸ್ಲಾ ಕಾರುಗಳನ್ನು ಮಾರಾಟ ಮಾಡಲು ಮತ್ತು ಸರವಿಸ್‌ ನೀಡಲು ನಮಗೆ ಮೊದಲು ಅನುಮತಿಸದ ಯಾವುದೇ ಸ್ಥಳದಲ್ಲಿ ಉತ್ಪಾದನಾ ಘಟಕವನ್ನು ಹಾಕುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ತಯಾರಿಸಲು ಸಿದ್ಧವಾಗಿದ್ದರೆ ‘ಯಾವುದೇ ಸಮಸ್ಯೆ ಇಲ್ಲ’ ಆದರೆ ಕಂಪನಿಯು ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಹೇಳಿದ್ದರು.
ಕಳೆದ ವರ್ಷ ಆಗಸ್ಟ್‌ನಲ್ಲಿ, ದೇಶದಲ್ಲಿ ಆಮದು ಮಾಡಿಕೊಂಡ ವಾಹನಗಳೊಂದಿಗೆ ಟೆಸ್ಲಾ ಮೊದಲು ಯಶಸ್ವಿಯಾದರೆ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಬಹುದು ಎಂದು ಮಸ್ಕ್ ಹೇಳಿದ್ದರು.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

ಟೆಸ್ಲಾ ತನ್ನ ವಾಹನಗಳನ್ನು ಭಾರತದಲ್ಲಿ ಪ್ರಾರಂಭಿಸಲು ಬಯಸಿದೆ.ಆದರೆ ಆಮದು ಸುಂಕಗಳು ಯಾವುದೇ ದೊಡ್ಡ ದೇಶಕ್ಕಿಂತ ವಿಶ್ವದಲ್ಲೇ ಅತ್ಯಧಿಕವಾಗಿದೆ. ಪ್ರಸ್ತುತ, ಭಾರತವು 40,000 ಅಮೆರಿಕನ್‌ ಡಾಲರ್‌ಗಳಿಗಿಂತ ಹೆಚ್ಚು CIF (ವೆಚ್ಚ, ವಿಮೆ ಮತ್ತು ಸರಕು ಸಾಗಣೆ) ಮೌಲ್ಯದೊಂದಿಗೆ ಸಂಪೂರ್ಣವಾಗಿ ಆಮದು ಮಾಡಿಕೊಂಡ ಕಾರುಗಳ ಮೇಲೆ 100 ಪ್ರತಿಶತ ಆಮದು ಸುಂಕವನ್ನು ವಿಧಿಸುತ್ತದೆ ಮತ್ತು ಅದಕ್ಕಿಂತ ಕಡಿಮೆ ಬೆಲೆಯ ಕಾರುಗಳ ಮೇಲೆ 60 ಪ್ರತಿಶತವನ್ನು ವಿಧಿಸುತ್ತದೆ ಎಂದು ಅವರು ಹೇಳಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement