ಜೂನ್ 1ರ ಮೊದಲು ಕೇರಳಕ್ಕೆ ಮುಂಗಾರು ಆಗಮನ : ಹವಾಮಾನ ಇಲಾಖೆ

ನವದೆಹಲಿ: ಮೇ 15 ರಂದು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮುಂಗಾರು ಅಪ್ಪಳಿಸಿದ ನಂತರ ಹವಾಮಾನ ಇಲಾಖೆಯು ಮೇ 27 ರಂದು ಮುಂಗಾರು ಕೇರಳವನ್ನು ತಲುಪುತ್ತದೆ ಎಂದು ಹೇಳಿತ್ತು. ಸಾಮಾನ್ಯವಾಗಿ ಇದು ಜೂನ್ 1 ರಂದು ಕೇರಳವನ್ನು ತಲುಪುತ್ತದೆ. ಆದರೆ ಈಗ ಜೂನ್ 1 ರ ಮೊದಲು ಕೇರಳದಲ್ಲಿ ಮುಂಗಾರು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತನ್ನ ನವೀಕರಣದಲ್ಲಿ ಹೇಳಿದೆ.
‘ದಕ್ಷಿಣ ಅರೇಬಿಯನ್ ಸಮುದ್ರದ ಮೇಲೆ ಪಶ್ಚಿಮ ಮಾರುತಗಳು ತೀವ್ರಗೊಂಡಿದೆ. ಉಪಗ್ರಹ ಚಿತ್ರಗಳ ಪ್ರಕಾರ, ಕೇರಳ ಕರಾವಳಿ ಮತ್ತು ಪಕ್ಕದ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಮೋಡ ಕವಿದಿದೆ. ಹೀಗಾಗಿ, ಮುಂದಿನ 2-3 ದಿನಗಳಲ್ಲಿ ಕೇರಳದ ಮೇಲೆ ಮುಂಗಾರು ಆರಂಭಕ್ಕೆ ಅನುಕೂಲಕರವಾದ ಪರಿಸ್ಥಿತಿಗಳು ಇವೆ’ ಎಂದು ಅದು ತಿಳಿಸಿದೆ.

ಮುಂಗಾರು ಪ್ರವೇಶಕ್ಕೂ ಮುನ್ನವೇ ಮಳೆ
ಅನುಕೂಲಕರ ವಾತಾವರಣವಿಲ್ಲದಿರುವುದು ಕೇರಳಕ್ಕೆ ಮುಂಗಾರು ಪ್ರವೇಶ ವಿಳಂಬಕ್ಕೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ. ಮಾನ್ಸೂನ್ ಆಗಮನಕ್ಕೆ ಗಾಳಿಯಲ್ಲಿ ಸ್ಥಿರತೆಯ ಅಗತ್ಯವಿದೆ ಮತ್ತು ಪ್ರಸ್ತುತ ಕೇರಳದಲ್ಲಿ ಪಶ್ಚಿಮ ಮಾರುತಗಳು ಮುಂದುವರೆದಿದೆ, ಆದ್ದರಿಂದ ಅದು ಇಂದು ಕೇರಳವನ್ನು ತಲುಪುತ್ತಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆದರೆ ಕೇರಳದಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ ಮುಂಗಾರು ಪೂರ್ವ ಮಳೆ ಮುಂದುವರಿದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಈ ವರ್ಷ ಶೇ.99ರಷ್ಟು ಮುಂಗಾರು ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಮುಂಗಾರು ಹಂಗಾಮು ರೈತರಿಗೆ ಸಂತಸ ತರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಗಾರು ಚುರುಕು ಸಾಧ್ಯತೆ

ಪ್ರಮುಖ ಸುದ್ದಿ :-   ವೀಡಿಯೊ..| ಬಿರುಗಾಳಿ-ಆಲಿಕಲ್ಲು ಮಳೆಯ ಹೊಡೆತಕ್ಕೆ ಇಂಡಿಗೋ ವಿಮಾನಕ್ಕೆ ಹಾನಿ ; ಕಿರುಚಿಕೊಂಡ ಪ್ರಯಾಣಿಕರು

ಮುಂದಿನ 48 ಗಂಟೆಗಳಲ್ಲಿ ಆಗ್ನೇಯ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಕೆಲವು ಭಾಗಗಳಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಮಾಹಿತಿ ಸಂಸ್ಥೆ ಸ್ಕೈಮೆಟ್ ತಿಳಿಸಿದೆ. ಮಾನ್ಸೂನ್ ಸಾಮಾನ್ಯ ಸಮಯಕ್ಕೆ ಕೇರಳವನ್ನು ತಲುಪುತ್ತದೆ ಮತ್ತು ತಡವಾಗುವುದಿಲ್ಲ ಎಂದು ಹೇಳಿದೆ.
ಮಾನ್ಸೂನ್ ಮಳೆಯು ಋತುಮಾನದ ಮಳೆಯಾಗಿದೆ. ಬಿರು ಬೇಸಿಗೆಯ ನಂತರ ಮುಂಗಾರು ಹಂಗಾಮು ಆರಂಭವಾಗುತ್ತದೆ. ಭಾರತದಲ್ಲಿ ಇದು ಜೂನ್ ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳವರೆಗೆ ಮಾನ್ಸೂನ್‌ ಇರುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement