ಶಿರಸಿ: ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಜೂನ್ 14ರಂದು ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಬೃಹತ್ ಜನ ಜಾಗೃತಿ ಸಭೆ

ಶಿರಸಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಜೂನ್‌ 14 ರಂದು ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ಬೃಹತ್ ಜನ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನದಿ ಜೋಡಣೆ ಯೋಜನೆಯ ದುಷ್ಪರಿಣಾಮದ ಕುರಿತು ಶಿರಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ ತಾಲೂಕುಗಳಲ್ಲಿ ಬೇಡ್ತಿ ಕಣಿವೆ ಉಳಿಸಿ ಅಭಿಯಾನದ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಇಂತಹ ಯೋಜನೆ ಜಾರಿಯಾದರೆ ಈ ಭಾಗವೂ ಮತ್ತೊಂದು ಎತ್ತಿನಹೊಳೆ ಪ್ರದೇಶವಾಗಿ ಮಾರ್ಪಡುತ್ತದೆ. ಅವೈಜ್ಞಾನಿಕ ಹಾಗೂ ನಿಷ್ಪ್ರಯೋಜಕ ಯೋಜನೆಯಿಂದ ಪರಿಸರ ಹಾನಿಯ ಜೊತೆ ಜನಜೀವನಕ್ಕೂ ಹಾನಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜೂನ್‌ 5 ರಿಂದ ವಿವಿಧೆಡೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ವಿಶ್ವ ಪರಿಸರದ ದಿನವಾದ ಜೂನ್‌ 5ರಂದು ಬೆಳಿಗ್ಗೆ ೧೦.೩೦ಕ್ಕೆ ಸಹಸ್ರಲಿಂಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಶಾಲ್ಮಲಾ ನದೀ ತೀರದ ಹಳ್ಳಿಗಳ ಜನರು ಆಗಮಿಸಿ ಹೋರಾಟದ ಸಂಕಲ್ಪ ಮಾಡಲಿದ್ದಾರೆ.ಬಳಿಕ ವಿವಿಧ ಗ್ರಾಮ ಪಂಚಾಯತ, ಸಹಕಾರ ಸಂಸ್ಥೆ ಸೇರಿದಂತೆ ಹಲವು ಕಡೆಗಳಲ್ಲಿ ಜನರಿಗೆ ತಿಳಿವಳಿಕೆ ಮೂಡಿಸುತ್ತೇವೆ. ಶಾಲ್ಮಲಾ ನದೀ ತೀರದ ಹಳ್ಳಿಗಳ ಜನರು ಆಗಮಿಸಿ ಹೋರಾಟದ ಸಂಕಲ್ಪ ಮಾಡಲಿದ್ದಾರೆ. ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಈಗಾಗಲೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಶಿವರಾಮ ಹೆಬ್ಬಾರ ಇವರನ್ನು ಆಹ್ವಾನಿಸಲಾಗಿದೆ. ಪರಿಸರ ವಿಜ್ಞಾನಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಹಕಾರಿ ಕ್ಷೇತ್ರ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಮುಖಂಡರು ಆಗಮಿಸಲಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ರೈತರು, ಪರಿಸರ ಆಸಕ್ತರು, ನಾಗರಿಕರಿಗೆ ಬೇಡ್ತಿ ಶಾಲ್ಮಲಾ ಪಟ್ಟಣದ ಹೊಳೆ ಕಣಿವೆ ಉಳಿಸಿ ಸಭೆಗೆ ಆಗಮಿಸಲು ಆಹ್ವಾನ ನೀಡಲಾಗಿದೆ ಎಂದರು.
ಬೇಡ್ತಿ- ಅಘನಾಶಿನಿ ನದಿ ಜೋಡಣೆ ಮಾಡಿ ನೀರನ್ನು ಬಯಲುಸೀಮೆಗೆ ಒಯ್ಯುವ ಸರ್ಕಾರದ ನಿಲುವನ್ನು ಬಲವಾಗಿ ವಿರೋಧಿಸಲಾಗುತ್ತಿದ್ದರೂ ಸರ್ಕಾರ ಇಂತಹ ಯೋಜನೆಗಳಿಗೆ ಮುಂದಾಗುತ್ತಿದೆ . ಆದ್ದರಿಂದ ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನ ದಲ್ಲಿ ಜನಾಂದೋಲನ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವರ್ಣವಲ್ಲಿ ಮಹಾಸಂಸ್ಥಾನದ ಅಧ್ಯಕ್ಷ ವಿ ಎನ್ ಹೆಗಡೆ ಬೊಮ್ನಳ್ಳಿ ಹೇಳಿದರು.

ಜೂ.6 ರಂದು ಸ್ವರ್ಣವಲ್ಲಿ ಮಠದಲ್ಲಿ ಪರಿಸರ ಜಾಗೃತಿ ಸಭೆ ನಡೆಯಲಿದೆ. 7 ರಂದು ಯಲ್ಲಾಪುರದ ನಂದೊಳ್ಳಿ, ಚಂದಗುಳಿ ಭಾಗದಲ್ಲಿ. 8 ರಂದು ಮುಂಡಗೋಡ ತಾಲ್ಲೂಕಿನ ವಿವಿಧೆಡೆ, 9 ರಂದು ಹಿತ್ಲಳ್ಳಿ, ಉಮ್ಮಚಗಿ, ಕುಂದರಗಿ ಭಾಗದ ಹಳ್ಳಗಳಲ್ಲಿ ಬೇಡ್ತಿ ಅಭಿಯಾನ ನಡೆಯಲಿದೆ. ಬಳಿಕ ಸಾಲ್ಕಣಿ, ವಾನಳ್ಳಿ, ಹುಲೇಕಲ್ ಹಳ್ಳಗಳಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಹೆಗಡೆ ಗಡೀಕೈ, ಶ್ರೀಪಾದ ಹೆಗಡೆ ಶಿರನಾಲಾ, ನಾರಾಯಣ ಹೆಗಡೆ ನಟ್ಟರಕೇರಿ, ಗಣಪತಿ ಬಿಸ್ಲಕೊಪ್ಪ, ಹೇರಂಭ ಹೆಗಡೆ, ವಿಶ್ವೇಶ್ವರ ಹೆಗಡೆ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement