ರಸ್ತೆಯಿಂದ ಹಾರಿಬಿದ್ದು ಟ್ರಾನ್ಸ್ ಫಾರ್ಮರ್‌ನಲ್ಲಿ ಸಿಲುಕಿಕೊಂಡ ಬೈಕ್…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇಡುಕ್ಕಿ (ಕೇರಳ): ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯಿಂದೆಸೆಯಲ್ಪಟ್ಟು ಟ್ರಾನ್ಸ್ ಫಾರ್ಮರ್‌‌ನಲ್ಲಿ ಸಿಲುಕಿಕೊಂಡ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ ಎಂಬಲ್ಲಿ ನಡೆದಿದೆ.

ಅಪಘಾತಕ್ಕೀಡಾಗಿ ರಸ್ತೆಯಿಂದ ಎಸೆಯಲ್ಪಟ್ಟ ಬೈಕ್ ಟ್ರಾನ್ಸ್ ಫಾರ್ಮರ್ ಗಾರ್ಡ್ ನೊಳಗೆ ಸಿಲುಕಿಕೊಂಡಿದ್ದು, ಬೈಕ್ ಸವಾರ ಪವಾಡ ಸದೃಶವಾಗಿ ಪಾರಾಗಿದ್ದಾನೆ. ವೇಗವಾಗಿ ಬಂದ ಬೈಕ್ ನಿಯಂತ್ರಣ ಕಳೆದುಕೊಂಡು ಕನಿಷ್ಠ 1.5 ಮೀಟರ್ ಎತ್ತರಕ್ಕೆ ಪುಟಿದೇಳುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದವು.

ಯುವಕನಂತೆ ಕಾಣುತ್ತಿದ್ದ ಸವಾರ ಡೋಂಬರ್ ಮೇಲೆ ಸ್ಕಿಡ್ ಆಗಿದ್ದು, ಬೈಕ್‌ನಿಂದ ಹಾರಿ ಬಿದ್ದಿದ್ದಾನೆ. ಯಾವುದೇ ಗಂಭೀರ ಗಾಯಗಳಾಗಿಲ್ಲ.
ಸ್ಥಳೀಯರ ಪ್ರಕಾರ, ಸವಾರ ಬೇರೆ ಬೈಕ್‌ಗಳಲ್ಲಿ ಸ್ನೇಹಿತರೊಂದಿಗೆ ತೆರಳಿದ್ದಾನೆ. ಕೆಎಸ್‌ಇಬಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದು, ಜೆಸಿಬಿ ಮೂಲಕ ಬೈಕ್ ಹೊರತೆಗೆಯಲಾಗಿದೆ. ಬೈಕ್ ಸವಾರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement