ಆಮ್‌ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಪುನರ್ ನೇಮಕ, ಬೆಂಗಳೂರು ನಗರಾಧ್ಯಕ್ಷರ ಹುದ್ದೆ ಮೋಹನ್‌ ದಾಸರಿ ಹೆಗಲಿಗೆ

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿ (AAP)ಯ ರಾಜ್ಯ ಹಾಗೂ ಬೆಂಗಳೂರು ನಗರ ಪದಾಧಿಕಾರಿಗಳ ತಂಡದ ಪುನರ್‌ ರಚನೆಯಾಗಿದ್ದು, ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಹಾಗೂ ಬೆಂಗಳೂರು ನಗರಾಧ್ಯಕ್ಷರಾಗಿ ಮೋಹನ್‌ ದಾಸರಿ ಪುನರಾಯ್ಕೆಯಾಗಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿರ್ದೇಶನದಂತೆ ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ ರಾಜ್ಯ ಪದಾಧಿಕಾರಿಗಳ ತಂಡದ ಪುನರ್ರಚನೆ ಮಾಡಿದ್ದಾರೆ.

ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ ರಾವ್‌ ಹಾಗೂ ವಿಜಯ್‌ ಶರ್ಮಾ ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಸಂಚಿತ್‌ ಸಹಾನಿ-ರಾಜ್ಯ ಪ್ರಧಾನ ಕಾರ್ಯದರ್ಶಿ, ಹರಿಹರನ್‌-ರಾಜ್ಯ ಖಜಾಂಚಿ, ಜಗದೀಶ್ ವಿ -ರಾಜ್ಯ ಮಾಧ್ಯಮ ಉಸ್ತುವಾರಿಗಳು ಹಾಗೂ ಕೆ. ಮಥಾಯ್ ರಾಜ್ಯ ವಕ್ತಾರ ಹುದ್ದೆಗೆ ನೇಮಕಗೊಂಡಿದ್ದಾರೆ.
ಅಲ್ಲದೆ, ರಾಜ್ಯ ಕಾರ್ಯದರ್ಶಿಗಳಾಗಿ ಎಚ್.ಡಿ.ಬಸವರಾಜು, ಡಾ. ವೆಂಕಟೇಶ್‌, ಬಿ.ಟಿ.ನಾಗಣ್ಣ, ಲಕ್ಷ್ಮೀಕಾಂತ್‌ ರಾವ್‌, ಶಾಂತಲಾ ದಾಮ್ಲೆ ನೇಮಕಗೊಂಡಿದ್ದಾರೆ. ರಾಜ್ಯ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ದರ್ಶನ್‌ ಜೈನ್‌ ಹಾಗೂ ವಿವೇಕಾನಂದ ಸಾಲಿನ್ಸ್‌ ಅವರವನ್ನು ನೇಮಿಸಲಾಗಿದೆ.

ಬೆಂಗಳೂರು ನಗರ ಅಧ್ಯಕ್ಷರಾಗಿ ಮೋಹನ ದಾಸರಿ ನೇಮಕವಾಗಿದ್ದಾರೆ. ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ ರಾಥೋಡ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಚಂದ್ರ, ಬೆಂಗಳೂರು ನಗರ ಕಾರ್ಯದರ್ಶಿಗಳಾಗಿ ಸೀತಾರಾಮ ಗುಂಡಪ್ಪ, ರಮೇಶ ಬೆಲ್ಲಂಕೊಂಡ, ಪ್ರಕಾಶ ನಾಗರಾಜ, ರಾಜಶೇಖರ ದೊಡ್ಡಣ್ಣ, ಫರಿದುದ್ದೀನ್‌ ಶರೀಫ್‌, ಚೆನ್ನಣ್ಣ ನೆಲ್ಲೂರು, ಮಂಜುನಾಥ ಆರ್‌.ಸ್ವಾಮಿ, ಪ್ರಕಾಶ ನೆಡುಂಗಾಡಿ, ತೀರತ್‌ ಪ್ರಸಾದ ಎಸ್‌ ಅವರನ್ನು ನೇಮಕ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement