ಒಂದು ತಿಂಗಳು ಮೇಲ್ಪಟ್ಟ ಅವಧಿಗೆ ಧ್ವನಿವರ್ಧಕಗಳ ಬಳಕೆ ಪರವಾನಿಗೆಗೆ ಶುಲ್ಕ ವಿಧಿಸಿದ ಸರ್ಕಾರ

ಬೆಂಗಳೂರು : ಒಂದು ತಿಂಗಳ ಮೇಲ್ಪಟ್ಟ ಧ್ವನಿವರ್ಧಕಗಳ ಬಳಕೆ ಪರವಾನಿಗೆಗೆ ಸರ್ಕಾರ ಈಗ ಶುಲ್ಕ ನಿಗದಿ ಪಡಿಸಿ ಆದೇಶ ಹೊರಡಿಸಿದೆ.
ಒಂದು ತಿಂಗಳ ಮೇಲ್ಪಟ್ಟ ಧ್ವನಿವರ್ಧಕಗಳ ಬಳಕೆ ಪರವಾನಿಗೆಗೆ ಒಟ್ಟು 450 ರೂ ಶುಲ್ಕವನ್ನು ನಿಗದಿಪಡಿಸಿದೆ. ಈ ಹಿಂದೆ ಒಂದು ತಿಂಗಳಿಗಿಂತ ಮೇಲ್ಪಟ್ಟು ನೀಡುವ ಪರವಾನಿಗಳಿಗೆ ಶುಲ್ಕ ನಿಗದಿಪಡಿಸಿರಲಿಲ್ಲ. ಈಗ ಸರ್ಕಾರ ಪರವಾನಿಗೆಗೆ ಶುಲ್ಕವನ್ನು ವಿಧಿಸಿದೆ.

ಧ್ವನಿವರ್ಧಕ ಪರವಾನಗಿಗೆ ನಿಗದಿಪಡಿಸಿರುವ ಶುಲ್ಕ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಒಂದು ದಿನದ ಅವಧಿಗೆ 75 ರೂ. 1 ರಿಂದ 31 ದಿನಗಳ ಅವಧಿಗೆ (15) ಹಾಗೂ 01 ತಿಂಗಳ ಅವಧಿಗೆ 450 ರೂ. ದರ ನಿಗದಿಪಡಿಸಲಾಗಿದೆ. ಸರ್ಕಾರ ಶಬ್ದ ಮಾಲಿನ್ಯ (ಪ್ರತಿಬಂಧಕ ಹಾಗೂ ನಿಯಂತ್ರಣ) ನಿಯಮ 2000 ಅನ್ನು ಅನುಷ್ಠಾನಗೊಳಿಸಿ, ರಾಜ್ಯಾದ್ಯಂತ ಧ್ವನಿವರ್ಧಕ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದೆ.
ಕಾನೂನಿನ ಪ್ರಕಾರ ಧ್ವನಿವರ್ಧಕಗಳ ಬಳಕೆಗೆ ಎರಡು ವರ್ಷಗಳ ಅವಧಿಯ ವರೆಗೆ ಪರವಾನಿಗೆ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿ ಒಂದು ತಿಂಗಳಿಗಿಂತ ಮೇಲ್ಪಟ್ಟ ಕಾಲಾವಧಿಗೆ ನೀಡಲಾಗುವ ಎಲ್ಲಾ ಪರವಾನಿಗೆಗಳಿಗೆ ಒಟ್ಟಾರೆ ಶುಲ್ಕ 450 ರೂ.ಗಳನ್ನು ನಿಗದಿ ಪಡಿಸಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement